ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ

(ರಾಗ ಮೋಹನ ಅಟ ತಾಳ ) ನಿನ್ನ ದಿವ್ಯ ಮೂರುತಿಯ ಕಣ್ಣುದಣಿಯ ನೋಡಿ ಧನ್ಯನಾದೆನೊ ಧರೆಯೊಳು ||ಪ|| ಇನ್ನು ಈ ಭವ ಭಯಕೆ ಅಂಜಲೇತಕೊ ಚೆನ್ನ ಸಿರಿವೆಂಕಟೇಶ ಶ್ರೀಶ ||ಅ|| ಏಸು ಜನ್ಮದ ಪುಣ್ಯ ಬಂದೊದಗಿತೊ ಶ್ರೀ ಸ್ವಾಮಿ ಪುಷ್ಕರಣಿ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ

(ರಾಗ ಮೋಹನ ಅಟ ತಾಳ ) ನಿನ್ನ ದಯದೃಷ್ಟಿಗೆ ಚಿತ್ತವಿಲ್ಲದಿರೆ ಮುನ್ನೇನು ಗತಿಯು ಎನಗೆ ||ಪ|| ಚೆನ್ನಾರ ಚೆಲುವ ಕೇಶವರಾಯ ನಂಬಿದೆನೊ ಧನ್ಯನ ಮಾಡಿ ಸಲಹೋ ದೇವ ||ಅ|| ಅರಿಯೆನೋ ತಾರತಮ್ಯನುಸಾರಗಳಿಂದ ಗುರು ಹಿರಿಯರನು ಭಜಿಸದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಳಿಯ ಹರಿದು ಬಿಸಾಟೆ

( ರಾಗ ನಾದನಾಮಕ್ರಿಯೆ ಅಟತಾಳ) ತಾಳಿಯ ಹರಿದು ಬಿಸಾಟೆ, ಇಂಥ ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ||ಪ|| ಒಡತಿಯೆಲ್ಲಮ್ಮನೆಂದು ಇಲ್ಲದ್ಹರಿಕೆ ಹೊತ್ತು ಸಿಡಿಯಾ ಊರಿಸಿಕೊಂಡು ಜೋಲಾಡುವೆ ಕಡುಕೋಪದಿಂದ್ಯಮನವರು ಶಿಕ್ಷಿಸಲು ನಿ- ನ್ನೊಡನೆ ಬಂದಾಗ ರಕ್ಷಿಸುವಳೆ ಮೂಳಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು

( ರಾಗ ಮೋಹನ ಆದಿ ತಾಳ) ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು ||ಪ|| ಅಷ್ಟಾದರು ಎನ್ನವಗುಣ ಎಣಿಸದೆ ಸತ್ಯ ಸಂಕಲ್ಪ ತಿಮ್ಮಪ್ಪ ನೀನು ||ಅ|| ಬೆಳಗಿನ ಝಾವದಿ ಹರಿಯ ಸ್ಮರಣೆಯ ಮಾಡದಿರುವುದು ತಪ್ಪು ಮಲಮೂತ್ರ ವಿಸರ್ಜನೆ ಮೃತ್ತಿಕೆಯಲಿ ಮಲವ ತೊಳೆಯದಿರುವುದು ತಪ್ಪು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೊಳಲದಿರು ಕಂಡ ಕಡೆಗೆ

( ರಾಗ ಮುಖಾರಿ ಅಟತಾಳ) ತೊಳಲದಿರು ಕಂಡ ಕಡೆಗೆ, ಪರಮಾತ್ಮ- ನೊಳಕಂಡು ಸುಖಿಸೊ ಮನವೆ || ಲಿಪಿಯೊಳಖಿಳವ ಚಿಂತಿಸಿ ಕಡೆ ಕಡೆಗೆ ಕಪಿಯಂತೆ ಎಡೆಯಾಡದೆ ಮನವೆ ಗುಪಿತದೊಳಗಿದ್ದಾತ್ಮನ ಧ್ಯಾನಿಸಲು ಅಪರಿಮಿತ ಸುಖ ಸುಖಿಸುವೆ ಮನವೆ || ನಾಗ ನರ ಸುರಲೋಕ ತಿರುತಿರುಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುಂಗೆ ಮಂಗಳತರಂಗೆ

( ರಾಗ ಭೂಪಾಳಿ ಝಂಪೆ ತಾಳ) ತುಂಗೆ ಮಂಗಳತರಂಗೆ ||ಪ|| ಹರಿಯ ಸರ್ವಾಂಗೆ ಜಯ ಜಯತು ಜಯ ತುಂಗಭದ್ರೆ ||ಅ|| ಆದಿಯೊಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ ಆದಿ ವರಾಹನ ದಾಡೆಗಳಿಂದ ಬಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆನೆಬೇಕು ನೆನೆಬೇಕು ನೆನೆಯಬೇಕಮ್ಮ

(ರಾಗ ಮಧ್ಯಮಾವತಿ ಆದಿತಾಳ ) ನೆನೆಬೇಕು ನೆನೆಬೇಕು ನೆನೆಯಬೇಕಮ್ಮ||ಪ|| ಮನದ ಚಪಲ ಬುದ್ಧಿ ಇನ್ನು ಬಿಡದಮ್ಮ ||ಅ|| ಎಡೆಬಿಡದಲೆ ನಿನ್ನ ಒಡಲ ಚಿಂತಿಸುವೆ ಕಡಲಶಯನನ ನಾಮ ಬಿಡದೆ ಹಗಲಿರುಳು || ಹೊತ್ತು ಹೋಯಿತು ಇನ್ನು ವ್ಯರ್ಥವಾಗುವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ

(ರಾಗ ಕಾಂಭೋಜ ಆದಿ ತಾಳ ) ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ ಎಚ್ಚತ್ತಿರೆಚ್ಚತ್ತಿರೆಲೋ ರಾಮುಗ ||ಪ|| ಒಂಭತ್ತು ಬಾಗಿಲ ಪಂಜರವನಯ್ದಿದೆ ಕಂಭವಿಲ್ಲ ಕದವು ಮೊದಲೆ ಇಲ್ಲ ಎಂಭತ್ತು ಸಾವಿರ ಸಂದು ಗಂಟಿನ ಗೂಡ ನಂಬಿ ನೀ ಕೆಡದಿರೊ ಎಲೊ ರಾಮುಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ( ಉದಯರಾಗ )

ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ|| ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ- ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ ವಕ್ರನಾದನು ನಮ್ಮ ಕ್ರೀಡೆಗಳಿಗೆ ಅಕಟ ಈ ಕ್ರೂರಗಕ್ರೂರ ಪೆಸರೇತಕೆನುತ || ರಥವ ನಿಲ್ಲಿಸದೆ ಮೋಸ ಹೋದೆವಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದನ ಕಂದನ ಇಂದುವದನನ

(ರಾಗ ಕಾಪಿ ಅಟತಾಳ ) ನಂದನ ಕಂದನ ಇಂದುವದನನ ಎಂದು ಬಿಗಿದಪ್ಪಿ ಮುದ್ದಿಡುವೆ ನಾ ||ಪ || ಉಂಗುರ ಕೇಶಗಳು ಶಿರದ ಮೇಲ್ಕಟ್ಟು ರಂಗಯ್ಯನ ಫಣೆಯಲಿ ಕಸ್ತೂರಿ ಬೊಟ್ಟು ||ಅ || ಝಳಝಳಿರೆನ್ನುತ ಕರ್ಣ ಕುಂಡಲವು ಥಳಥಳಿಸುವ ದಿವ್ಯ ಪಚ್ಚೆ ಪದಕವು || ಆಜಾನುಬಾಹು ಅಜನ ಪೆತ್ತ ನಾಭಿ
ದಾಸ ಸಾಹಿತ್ಯ ಪ್ರಕಾರ
ಬರೆದವರು