ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ

( ರಾಗ ಶ್ರೀರಂಜನಿ ರೂಪಕತಾಳ) ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ || ಮನವೆಂಬೊ ಮಂಟಪ ತನುವೆಂಬೊ ಹಾಸುಮಂಚ ಜ್ಞಾನವೆಂಬೊ ದಿವ್ಯ ದೀಪದ ಬೆಳಕಿಲಿ ಸನಕಾದಿವಂದ್ಯ ನೀ ಬೇಗ ಬಾರೋ || ಪಂಚದೈವರು ಯಾವಾಗಲು ಎನ್ನ ಹೊಂಚು ಹಾಕಿ ನೋಡುತಾರೆ ಕೊಂಚಗಾರರು ಆರು ಮಂದಿ ಅವರ್-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಕಾಂತ ಎನಗಿಷ್ಟು ದಯಮಾಡೊ

( ರಾಗ ಕಾನಡಾ ಅಟತಾಳ) ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆ ಏಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ ||ಪ|| ಧನದಾಸೆಗಾಗಿ ನಾ ಧನಿಕರ ಮನೆಗಳ ಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ || ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದು ಸ್ನೇಹಾನುಬದ್ಧನಾಗಿ ಸತಿ ಸುತರ ಪೊರೆದೆನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ

( ರಾಗ ಸೌರಾಷ್ಟ್ರ ಏಕತಾಳ) ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ ಸಮರ್ಥಂಗಳಾಗಲಿಲ್ಲವೋ ||ಪ|| ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶೋಭಾನ ಶೋಭಾನವೆ

( ರಾಗ ಸೌರಾಷ್ಟ್ರ ಅಟತಾಳ) ಶೋಭಾನ ಶೋಭಾನವೆ ||ಪ|| ಭೂದೇವಿಯರಸ ವೆಂಕಟರಾಯಗೆ ಶೋಭಾನ ಶೋಭಾನವೆ || ಅಂದು ಕ್ಷೀರಾಂಬುನಿಧಿ ಮೊದಲಾಗಿ ಇಂದಿರೆ ಹರುಷದಿಂದುದಿಸಿ ಬಂದು ಕಂದರ್ಪ ಕೋಟಿ ಲಾವಣ್ಯಮೂರುತಿಯಾದ ಮಂದಾರಮಾಲೆಯ ಹಾಕಿದ ದೇವಗೆ || ಜನಕನ ಮನೆಯಲ್ಲಿ ರಾಜಾಧಿರಾಜರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು (೨) (ವಿನಾಯಕ ಸ್ತೋತ್ರ)

( ರಾಗ ಸೌರಾಷ್ಟ್ರ ಚಾಪುತಾಳ) ಶರಣು ಶರಣು ||ಪ|| ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ || ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ|| ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣು ಶರಣು (೧)

( ರಾಗ ನಾಟ ಝಂಪೆತಾಳ) ಶರಣು ಶರಣು ||ಪ|| ಶರಣು ಸಕಲೋದ್ಧಾರ ಅಸುರಕುಲಸಂಹಾರ ಅರಸುದಶರಥಬಾಲ ಜಾನಕೀಲೋಲ ||ಅ|| ಈ ಮುದ್ದು ಈ ಮುಖವು ಈ ತನುವಿನ ಕಾಂತಿ ಈ ಬಿಲ್ಲು ಈ ಬಾಣ ಈ ನೀತಿ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಆವ ದೇವರಿಗುಂಟು ಭೂಲೋಕದೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶರಣಂಬೆ ವಾಣಿ ಪೊರೆಯ ಕಲ್ಯಾಣಿ

( ರಾಗ ಕಲ್ಯಾಣಿ ಆದಿತಾಳ) ಶರಣಂಬೆ ವಾಣಿ ಪೊರೆಯ ಕಲ್ಯಾಣಿ ||ಪ|| ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ || ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ || ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರವಿಠಲನ ಸೋದರಸೊಸೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ

( ರಾಗ ಕಲ್ಯಾಣಿ ಆದಿತಾಳ) ಸತ್ಯವೆಂಬುದೆ ಸ್ನಾನ ಉಪವಾಸ ಜಪ ನೇಮ ಅ- ಸತ್ಯದಲಿ ಮಾಡುವ ಕರ್ಮ ವ್ಯರ್ಥ || ಪ|| ಅಪ್ಪಳಿಸಿ ಪರರ ಒಡವೆಗಳ ತಂದುಂಡು ತಾ- ನೊಪ್ಪದಿಂದುಪವಾಸ ವ್ರತವ ಮಾಡಿ ತಪ್ಪದಲೆ ಸ್ವರ್ಗವನು ಸೂರೆಗೊಂಬುವನೆಂಬೆ ಸರ್ಪಗಳು ಮಾಡಿದ ಅಪರಾಧವೇನಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಣ್ಣವನಿವನಾರಮ್ಮ

( ರಾಗ ಶಂಕರಾಭರಣ ಆದಿತಾಳ) ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ || ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿದಾಡುವ || ಭವಾದಿಗಳ ತಾತ ಭವಕೆ ತಾರಕನೀತ ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂಸಾರವೆಂಬಂಥ ಭಾಗ್ಯವಿರಲಿ

( ರಾಗ ಕಾಂಭೋಜ ಅಟತಾಳ) ಸಂಸಾರವೆಂಬಂಥ ಭಾಗ್ಯವಿರಲಿ ||ಪ|| ಕಂಸಾರಿ ನೆನವೆಂಬ ಸೌಭಾಗ್ಯವಿರಲಿ ||ಅ|| ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ ಪೊಂದಿದ ಅಣ್ಣನು ವನಜಸಂಭವನು ಇಂದುಮುಖಿ ಸರಸ್ವತೀದೇವಿಯೆ ಅತ್ತಿಗೆಯು ಎಂದಿಂದಿಗೂ ವಾಯುದೇವರೆ ಗುರುವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು