ನಿನ್ನ ದಾಸನಾದೆ

(ರಾಗ ಯದುಕುಲಕಾಂಭೋಜ ತ್ರಿಪುಟತಾಳ ) ನಿನ್ನ ದಾಸನಾದೆ ನಾನು ||ಪ|| ಎನ್ನ ಮನ್ನಿಸಿ ಮಮತೆಯ ಮಾಡಯ್ಯ ನೀನು ||ಅ|| ಜನನಿಯ ಗರ್ಭದೊಳು ನಾನು ಬಲು ದೀನತ್ವದಿಂದ ತೊಳಲಿ ಬಂದವನು ಚಿನುಮಯಾನಂದಾತ್ಮಕನು ಏ- ನನುಮಾನವಿಲ್ಲದೆ ನಿನ್ನ ನಂಬಿದೆನು || ಹಲವು ಜನ್ಮದಿ ತೊಳಲಿದೆನು ಬಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬಿ ಭಜಿಸಿರೋ

(ರಾಗ ಕಾಮವರ್ಧನಿ/ಪಂತುವರಾಳಿ ಛಾಪುತಾಳ ) ನಂಬಿ ಭಜಿಸಿರೋ ಜನರು ನಂಬಿ ಭಜಿಸಿರೋ ||ಪ|| ನಂಬಿ ಭಜಿಸಿ ಜನದ ಡಂಭಕತನವ ಬಿಟ್ಟು ಅಂಬುಜಾಕ್ಷ ಚಾಣೂರಮಲ್ಲಾರಿಯ ||ಅ|| ಚಲ್ಲಣವ ಉಟ್ಟು ತೊಟ್ಟು ಮಲ್ಲಗಟ್ಟ ಬಿಗಿದು ಕಟ್ಟಿ ಗೋವ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಳಿನಜಾಂಡ ತಲೆಯ ತೂಗಿ

(ರಾಗ ಶಂಕರಾಭರಣ ಅಟತಾಳ ) ನಳಿನಜಾಂಡ ತಲೆಯ ತೂಗಿ ಮೋಹಿಸುತಿರಲು ಕೊಳಲನೂದಿ ಭ್ರಾಜಿಸುವ ಚೆಲುವ ಕೃಷ್ಣರಾಯನ ನೋಡಿ ||ಪ|| ಹೊಳೆವ ಹೊಂಬಣ್ಣ ದಟ್ಟಿ ಚಲ್ಲಣ ಅಳವಡಿಸಿದ ನೀಲಿಯ ಬಿಗಿದು ಹಲವು ರನ್ನದ ಉಂಗುರನಿಟ್ಟು ಚೆಲುವ ಬೆರಳ ನಟಿಸುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರಿವಾಸರದುಪವಾಸದ ಭಾಗ್ಯವು

( ರಾಗ ಕೇದಾರಗೌಳ ) ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ||ಪ|| ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ ||ಅ|| ಸ್ನಾನ ಸಂಧ್ಯಾನ ಮೊದಲಾದ ಕರ್ಮನ್ಯೂನದ ಪಾಪರಾಶಿ ಹೇನು ಇರುವೆ ನೊಣ ಮೊದಲಾದ ಪ್ರಾಣಿಯ ಹಿಂಸೆಯ ಪಾಪಂಗಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗೋಕುಲದೊಳಗೋರ್ವ ರಾಕೇಂದುಮುಖಿ

( ರಾಗ ಸೌರಾಷ್ಟ್ರ ಅಟತಾಳ) ಗೋಕುಲದೊಳಗೋರ್ವ ರಾಕೇಂದುಮುಖಿ ತಾನು, ಜೋಕೆಲಿ ಕೊಡನ ಪೊತ್ತು ಬೇಕಾದವರಿಗೆ ನಾ ಕೊಡುವೆನು ಹಾಲು, ಆಕೆ ಸಾರುತ ಬಂದಳು ||೧|| ಕಣ್ಣಡಿಕದಪಿನ ಎಣ್ಣೆಗೆಂಪಿನ ಜಾಣೆ, ಕಣ್ಣಿಗೆ ಕಪ್ಪನ್ಹಚ್ಚಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಲಭಪೂಜೆಯ ಮಾಡಿ

( ರಾಗ ಕಾಂಭೋಜ ಝಂಪೆತಾಳ) ಸುಲಭಪೂಜೆಯ ಮಾಡಿ ಬಲವಿಲ್ಲದವರು ||ಪ|| ನಳಿನನಾಭನಪಾದನಳಿನಸೇವಕರು ||ಅ|| ಇರುಳು ಹಚ್ಚುವ ದೀಪ ಹರಿಗೆ ನೀರಾಜನವು ಮರೆ ಮಾಡುವ ವಸ್ತ್ರ ಪರಮ ಮಡಿಯು ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯು ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸೊ ಸರ್ವದ ಹರಿಯ

( ರಾಗ ಶಂಕರಾಭರಣ ಛಾಪುತಾಳ) ಸ್ಮರಿಸೊ ಸರ್ವದ ಹರಿಯ ||ಪ|| ಸುರವರ ದೊರೆಯ ಕರುಣಾನಿಧಿಯ ||ಅ|| ಮುನಿಜನ ವಂದ್ಯನ ಮನಸಿಜನಯ್ಯನ ಮನದಲಿ ಅನುದಿನ ನೆನೆಯೊ ಹರಿಯ || ನಂದನ ಕಂದನ ಇಂದಿರೆಯರಸನ ಮಂದರೋದ್ಧರನ ಚಂದದಿಂದಲಿ ಹರಿಯ || ವರಗುಣಪೂರ್ಣನ ಸರಸಿಜನೇತ್ರನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ಗೋವಿಂದ

(ರಾಗ ಧನಶ್ರೀ ಆದಿತಾಳ ) ನಾರಾಯಣ ಗೋವಿಂದ ಹರಿ ನಾರಾಯಣ ಗೋವಿಂದ ||ಪ|| ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದ ||ಅ|| ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ || ಮಂದರಗಿರಿ ಸಿಂಧುವಿನೊಳಮೃತ ತಂದು ಭಕ್ತರಿಗುಣಲೆಂದ || ಭೂಮಿಯ ಕದ್ದ ಖಳನ ಮರ್ದಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶೃಂಗಾರವಾಗಿದೆ ಶ್ರೀಹರಿಯ ಮಂಚ

( ರಾಗ ಬಿಲಹರಿ ಅಟತಾಳ)

 

ಶೃಂಗಾರವಾಗಿದೆ ಶ್ರೀಹರಿಯ ಮಂಚ ||ಪ||

ಅಂಗನೆ ರುಕ್ಮಿಣಿಯರಸನಾ ಮಂಚ ||ಅ||

 

ಬಡಗಿ ಮುಟ್ಟದ ಮಂಚ ಮಡುವಿನೊಳಿಹ ಮಂಚ

ಮೃಡನ ತೋಳಲಿ ನೆಲಸಿಹ ಮಂಚ ಸಡಗರವುಳ್ಳ ಮಂಚ

ಹೆಡೆಯುಳ್ಳ ಹೊಸ ಮಂಚ

ಪೊಡವಿಗೊಡೆಯ ಪಾಂಡುರಂಗನ ಮಂಚ ||

 

ಕಾಲಿಲ್ಲದಿಹ ಮಂಚ ಗಾಳಿ ನುಂಗುವ ಮಂಚ

ತೋಳು ಬಿಳುಪಿನ ಮಂಚ ವಿಷದ ಮಂಚ

ಕಾಳಗದೊಳರ್ಜುನನ ಮುಕುಟ ಕೆಡಹಿದ ಮಂಚ

ಕೇಳು ಪರೀಕ್ಷಿತನ ಕೊಂದುದೀ ಮಂಚ ||

 

ಕಣ್ಣು ಕಿವಿಯಾದ ಮಂಚ ಬಣ್ಣ ಬಿಳುಪಿನ ಮಂಚ

ಹೊನ್ನ  ಪೆಟ್ಟಿಗೆಯೊಳಗೆ ಅಡಗುವ ಮಂಚ

ಹುಣ್ಣಿಮೆಯ ಚಂದ್ರಮನ ಬಣ್ಣಕೆಡಿಸಿದ(/ಅಡ್ಡಗಟ್ಟುವ ) ಮಂಚ

ಕನ್ನೆ ಮಹಾಲಕ್ಷ್ಮಿಯರಸನ ಮಂಚ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ

( ರಾಗ ಭೈರವಿ ಅಟತಾಳ) ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ ವಾಣಿಯರಸನಯ್ಯನು ||ಪ|| ವೇಣುಗಾನಲೋಲ ಮೋಸಮಾಡಲು ಬಂದ ದೀನರಕ್ಷಕನಯ್ಯ ಮೋಹನಕೃಷ್ಣ || ಪತಿತಪಾವನ ಬಂದ ಸಚ್ಚಿದಾನಂದನು ಹಿತಕರನು ಬಂದ ನಿಖಿಳವೇದ ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು