ಸಣ್ಣವನಿವನಾರಮ್ಮ

ಸಣ್ಣವನಿವನಾರಮ್ಮ

( ರಾಗ ಶಂಕರಾಭರಣ ಆದಿತಾಳ) ಸಣ್ಣವನಿವನಾರಮ್ಮ ಪೇಳೆಲೆ ತಂಗಿ ||ಪ|| ಕಾಣದ ಮಾಣಿಕ್ಯವ ಕಂಡೆನು ಇಂದಿಲ್ಲಿ || ಒಬ್ಬರ ಸುತನಲ್ಲ ಭಕ್ತವತ್ಸಲನಕ್ಕ ಉಬ್ಬಿ ನೆನೆವರಲಿ ಸುತ್ತಿ ನಲಿದಾಡುವ || ಭವಾದಿಗಳ ತಾತ ಭವಕೆ ತಾರಕನೀತ ಧವಳಗಂಗೆಯ ಪೆತ್ತ ಶ್ರೀವತ್ಸದಿಂದೊಪ್ಪುವ || ಮುದ್ದು ಸುರಿವ ಬಾಲ ಸಜ್ಜನಪರಿಪಾಲ ಹದ್ದುವಾಹನನೆ ಅಕ್ಕ ತಂದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು