ಶರಣು ಶರಣು (೧)

ಶರಣು ಶರಣು (೧)

( ರಾಗ ನಾಟ ಝಂಪೆತಾಳ) ಶರಣು ಶರಣು ||ಪ|| ಶರಣು ಸಕಲೋದ್ಧಾರ ಅಸುರಕುಲಸಂಹಾರ ಅರಸುದಶರಥಬಾಲ ಜಾನಕೀಲೋಲ ||ಅ|| ಈ ಮುದ್ದು ಈ ಮುಖವು ಈ ತನುವಿನ ಕಾಂತಿ ಈ ಬಿಲ್ಲು ಈ ಬಾಣ ಈ ನೀತಿ ಭಾವ ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ಆವ ದೇವರಿಗುಂಟು ಭೂಲೋಕದೊಳಗೆ || ಉಟ್ಟ ಪೀತಾಂಬರವು ಉಡಿಘಂಟೆ ಮಾಣಿಕವು ತೊಟ್ಟ ನವರತ್ನಸರ ಕರುಣವಿರಲು ಕೊಟ್ಟ ನಂಬಿಕೆ ತಪ್ಪ ತನ್ನ ಭಕುತರಿಗೆಲ್ಲ ಸೃಷ್ಟಿಯೊಳೆಣೆಗಾಣೆ ಕೌಸಲ್ಯರಾಮ || ಭಾವಿಸಲು ಅಯೋಧ್ಯಾ ಪಟ್ಟಣದಲಿ ವಾಸ ಬೇಡಿದಿಷ್ಟಾರ್ಥಗಳ ಕೊಡುವೆನೆನುತಿರಲು ಭಾವಶುದ್ದಿಗಳೆಲ್ಲ ತನ್ನ ಭಕುತರ ಪೊರೆವ ಪುರಂದರವಿಠಲನೆ ರಘುರಾಮ ನಿಸ್ಸೀಮರಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು