ಯಾರ ಮಗನಮ್ಮ ರಂಗಯ್ಯ
( ರಾಗ ಜಂಜೂಟಿ ಛಾಪುತಾಳ)
ಯಾರ ಮಗನಮ್ಮ ರಂಗಯ್ಯ ||ಪ||
ಯಾರ ಮಗನಮ್ಮ ದಾರಿಯ ಕಟ್ಟುವ
ಯಾರಿಗು ಇವನ ದಾರಿಯು ತಿಳಿಯುದೆ ||
ಕಾಂತೆ ಕೇಳು ಏಕಾಂತದಿ ಮಲಗಿದ್ದೆ
ಕಾಂತನೆಂತೆ ಏಕಾಂತಕೆ ಕರೆದನೆ ||
ಅರವಿಂದಾನನೆ ಕೇಳು ಅರೆಮೊರೆಯಿಲ್ಲದೆ
ಅರೆಕಟ್ಟಿ ಎನ್ನ ಅಧರಮುದ್ದಿಕ್ಕಿದ ||
ಸರಸಿಜಾನನೆ ಕೇಳೇ ಸರಿರಾತ್ರಿವೇಳೆಯಲಿ
ಹರುಷದಿಂದಲಿ ಎನ್ನ ಸರಸಕ್ಕೆ ಎಳೆದನೆ ||
ಗಾಡಿಗಾರ ಶ್ರೀಪುರಂದರವಿಠಲ
ಗಾಢಾಲಿಂಗನ ಮಾಡಿ ಓಡಿಪೋದನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments