ನಿನ್ನ ಧ್ಯಾನದಲಿ ಶಕ್ತಿಯ ಕೊಡೊ

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ

ನಿನ್ನ ಧ್ಯಾನದಲಿ ಶಕ್ತಿಯ ಕೊಡೊ ಅನ್ಯದಲಿ ವಿರಕ್ತಿಯ ಕೊಡೊ ನಿನ್ನ ನೋಡುವ ಯುಕ್ತಿಯ ಕೊಡೊ ನಿನ್ನ ಪಾಡುವ ಭಕ್ತಿಯ ಕೊಡೊ ನಿನ್ಹತ್ತಿ ಬರುವ ಸಂಪತ್ತಿಯ ಕೊಡೊ ಚಿತ್ತದಿ ತತ್ವದ ಕೃತ್ಯವ ತೋರೊ ಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊ ಭವ ಕತ್ತಲೆಯೆನಗೆ ಮುತ್ತಿದೆ ಅತ್ತತ್ತ ಮಾಡೊ ಹಯವದನ ||
ದಾಸ ಸಾಹಿತ್ಯ ಪ್ರಕಾರ