ರಾಘವೇಂದ್ರ

ರಾಘವೇಂದ್ರ ತೀರ್ಥನೀತ ರಾಜಿಸುವಾತ

ರಾಘವೇಂದ್ರ ತೀರ್ಥನೀತ ರಾಜಿಸುವಾತ || ಪ || ಪಾಪೌಘಗಳೆಲ್ಲವ ನೋಡಿಸಿ ಪುಣ್ಯಗಳೀವಾತಾ || ಅ || ಬಣ್ಣ ಬಣ್ಣದಿಂದ ಬಹಳ ಬೋಧಿಸುವಾತ - ಬಹಳ ಸಣ್ಣ ದೊಡ್ಡಭೀಷ್ಟಗಳ ಸಾಧಿಸುವಾತಾ ಪುಣ್ಯವಂತರಿಂದ ಬಹು ಪೂಜೆಗೊಂಬಾತ - ನಮಗೆ ಕಣ್ಣ ಹಬ್ಬವಾಗುವಂತೆ ಕಾಣಿಸುವಾತಾ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ || ಪ || ಬಾರೋ ದುಃಖಾಪಹಾರ - ಬಾರೋ ದುರಿತದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಅ || ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲೋಲ ಶ್ರೀ ನರಹರಿ ಕಾಲರೂಪವ ತೋರ್ದೆ || ೧ || ವ್ಯಾಸನಿರ್ಮಿತ ಗ್ರಂಥ - ಮಧ್ವಕೃತ ಭಾಷ್ಯವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ |ಪ| ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು | ಕಾಯೋ ತವಕ ಚಂದ್ರ |ಅ ಪ| ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ | ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ |೧| ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ

ರಾಗ - ಶಂಕರಾಭರಣ : ತಾಳ - ಆದಿತಾಳ ರಾಘವೇಂದ್ರ ಯತಿ ಸಾರ್ವಭೌಮ ದುರಿತೌಘ ದೂರ ತೇ ನಮೋ ನಮೋ | ಮಾಘದರಿಪು ಮತ ಸಾಗರ ಮೀನ ಮಹಾಘ ವಿನಾಶನ ನಮೋ ನಮೋ | ಶ್ಲಾಘಿತ ಗುಣಗಣ ಸೂರಿ ಪ್ರಸಂಗ ಸದಾಗಮಜ್ಞ ತೇ ನಮೋ ನಮೋ | ಮೇಘಶ್ಯಾಮಲ ರಾಮಾರಾಧಕ ಅಮೋಘ ಬೋಧತೇ ನಮೋ ನಮೋ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ

ರಾಗ - ಧನ್ಯಾಶ್ರೀ : ತಾಳ - ಏಕತಾಳ ಗುರು ರಾಘವೇಂದ್ರರ ಚರಣ ಕಮಲವನ್ನು ಸ್ಮಸುವ ಮನುಜಗೆ | ಪ | ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ ಕರಿಯು ಕಂಡ ಸಿಂಹನ ತೆರನಾಗುವುದಯ್ಯ | ಅ ಪ | ಗುರುಮಧ್ವಮತವೆಂಬ ವರ ಕ್ಷೀರಾಂಬುಧಿಯಲ್ಲಿ ಹರಿ ಧರಿಸಿದ ಶಶಿಯಂತುದಿಸಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ

ರಾಗ - ಪೂರ್ವಿ : ತಾಳ - ಆದಿತಾಳ ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ | ಪ | ಸತತ ಮಾರ್ಗದಿ ಸಂತತ ಸೇವಿಪರಿಗೆ | ಅತಿಹಿತದಲಿ ಮನೋರಥವ ಕೊಡುವೆನೆಂದು | ಅ ಪ | ಚತುರ ದಿಕ್ಕು ವಿದಿಕ್ಕುಗಳಲ್ಲಿ | ಚರಿಪಾಜನರಲ್ಲಿ ಮಿತಿಲ್ಲದೆ ಬಂದು ಓಲೈಸುತಲಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೊಂದಿ ಬದುಕಿರೋ ರಾಘವೇಂದ್ರರಾಯರ

ರಾ ಗ - ಸೌರಾಷ್ಟ್ರ : ತಾ ಳ - ಆ ದಿ ತಾ ಳ ಪೊಂದಿ ಬದುಕಿರೋ ರಾಘವೇಂದ್ರರಾಯರ | ಕುಂದದೆಮ್ಮನು ಕರುಣದಿಂದ ಪೊರೆವರ | ಪ | ನಂಬಿ ತುತಿಸುವ ಜನಕದಂಬಕಿಷ್ಟವ | ತುಂಬಿಕೊಡುವನು ಅನ್ಯರ ಹಂಬಲೀಯನು | ೧ | ಅಲವಬೋಧರ ಸುಮತ ಜಲಧಿಚಂದಿರ | ಒಲಿದು ಭಕ್ತರ ಕಾವ ಸುಲಭ ಸುಂದರ | ೨ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ

ರಾ ಗ - ಕಲ್ಯಾಣಿ : ತಾಳ - ಆದಿತಾಳ ವೃಂದಾವನ ನೋಡಿರೋ | ಗುರುಗಳ ವೃಂದಾವನ ಪಾಡಿರೋ | ಪ | ವೃಂದಾವನ ನೋಡಿ ಆನಂದ ಮದವೇರಿ| ಚೆಂದದಿ ದ್ವಾದಶ ಪುಂಡ್ರಾಂಕಿತಗೊಂಬ | ಅ ಪ | ತುಂಗಭದ್ರಾ ನದಿಯ ತೀರದಲಿ | ಉತ್ತುಂಗ ಮಂಟಪದ ಮಧ್ಯದಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ

ರಾಗ - ಯದು ಕುಲ ಕಾಂಬೋದಿ : ತಾಳ - ಆದಿತಾಳ ರಾಘವೇಂದ್ರ ಗುರಾರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ | ಪ | ತುಂಗಾತೀರಾದಿ ರಘುರಾಮನ ಪೂಜಿಪರಾ | ನರಸಿಂಗನ ಭಜಕರಾ | ಅ ಪ | ಶ್ರೀ ಸುಧೀಂದ್ರಕರ ಸರೋಜ ಸಂಜಾತ | ಜಗದೊಳಗೆ ಪುನೀತ | ದಾಶರಥಿಯ ದಾಸತ್ವವ ತಾ ವಹಿಸೀ | ದುರ್ಮತಗಳ ಜಯಿಸೀ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ

ರಾ ಗ - ಪೂರ್ವಿ : ತಾಳ - ಮಠ್ಯತಾಳ ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ | ಪ | ಯಾಕೆ ಮೂಕನಾದೆ ಲೋಕಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ | ಅ ಪ | ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ | ಮಂದಿಯೊಳಗೆ ಎನ್ನ ಮಂದನ್ನ ಮಾಡಿದೊ | ೧ |
ದಾಸ ಸಾಹಿತ್ಯ ಪ್ರಕಾರ
ಬರೆದವರು