ಒಡೆಯ ಹರಿಸರ್ವೋತ್ತಮನೆಂಬ

ಒಡೆಯ ಹರಿಸರ್ವೋತ್ತಮನೆಂಬ

( ರಾಗ ಧನಶ್ರೀ ಆದಿತಾಳ) ಒಡೆಯ ಹರಿಸರ್ವೋತ್ತಮನೆಂಬ ದೃಢ ಜ್ಞಾನಿಗಳೆ ವೈಷ್ಣವರಲ್ಲದೆ ,ಇಂಥ ತುಡುಗ ಮುಂಡೆಗಂಡರಿಗಿನ್ನು ವೈಷ್ಣವ ಸಲ್ಲುವದೆ || ಗಡ್ಡ ಮೀಸೆ ಬೋಳಿಸಿಕೊಂಡು ಗೊಡ್ಡು ನಾಮ ತೀಡಿಕೊಂಡು ಅಡ್ಡಾದಿಡ್ಡಿ ಮುದ್ರೆಗಳ ಬಡಿದುಕೊಂಡಿನ್ನು ದೊಡ್ಡ ದೊಡ್ಡ ಮಾತುಗಳಾಡಿ ದೊಡ್ಡವರೆಂದ್ಹೇಳಿಕೊಂಬ ಬಡ್ಡೀಧಗಡೀ ಮಕ್ಕಳಿಗಿನ್ನು ವೈಷ್ಣವ ಸಲ್ಲುವದೆ || ಭಾಗವತರನ್ನೆ ಕಂಡು ಕಂಡ್ಹಾಂಗೆ ನಿಂದೆ ಮಾಡುತ ಸೋಗಿಲಿರುವ ಜೋಗೀ ತೊತ್ತಿನ ಮಕ್ಕಳಾದವರು ಈಗ ನಾವು ಶ್ರೇಷ್ಠರೆಂದು ಹೇಳಿಕೊಂಡು ತಿರುಗುವಂಥ ಗೂಗೆಮೋರೆ ನೀಚರಿಗಿನ್ನು ವೈಷ್ಣವ ಸಲ್ಲುವದೆ || ಗುರು ಮಧ್ವಾಂತರ್ಯಾಮಿಯಾದ ಪುರಂದರವಿಠಲನ ಮಹಿಮೆ ಸ್ಥಿರವಾಗಿ ನಂಬದೆ ಇರುವ ಗರುವಿನ ಮನುಜರು ಗುರುಮಂತ್ರ ಉಪದೇಶ ತಾರತಮ್ಯಜ್ಞಾನವಿಲ್ಲದಂಥ ಪರಮ ಚಂಡಾಲರಿಗಿನ್ನು ವೈಷ್ಣವ ಸಲ್ಲುವದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು