ಯಮನೆಲ್ಲ್ಯೂ ಕಾಣೆನೆಂದು.

ಯಮನೆಲ್ಲ್ಯೂ ಕಾಣೆನೆಂದು.

( ರಾಗ ಮುಖಾರಿ / ಶಿವರಂಜನಿ. ಝಂಪೆ ತಾಳ) ಯಮನೆಲ್ಲ್ಯೂ ಕಾಣೆನೆಂದು ಹೇಳಬೇಡ ||ಪ|| ಯಮನೇ ರಾಮಚಂದ್ರ ಸಂದೇಹ ಬೇಡ ||ಅ|| ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣನಿಗೆ ಯಮನೆ ಆದ || ನಂಬಿದ ಅರ್ಜುನನಿಗೆ ಬಂಟನಾದ ನಂಬದಿದ್ದ ಕೌರವನಿಗೆ ಕಂಟಕನಾದ || ನಂಬಿದ ಉಗ್ರಸೇನನಿಗೆ ಮಿತ್ರನಾದ ನಂಬದಿದ್ದ ಕಂಸನಿಗೆ ಶತ್ರುವಾದ || ನಂಬಿದ ಬಾಲಕನಿಗೆ ಹರಿಯಾದ ನಂಬದಿದ್ದ ಅವನ ಪಿತಗೆ ಅರಿಯಾದ || ನಂಬಿದವರ ಸಲಹುವ ನಮ್ಮ ದೊರೆಯು ಅಂಬುಜಾಕ್ಷ ಪುರಂದರವಿಠಲರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು