ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ

ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ |ಪ| ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು | ಕಾಯೋ ತವಕ ಚಂದ್ರ |ಅ ಪ| ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ | ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ |೧| ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ | ಶ್ರೀಮಹಾ ಮಹಿಮನೆ ಪಾಮರ ನಾ ನಿಮ್ಮ ನಾಮವೊಂದೆ ಬಲ್ಲೆ |೨| ಮಂತ್ರವ ನಾನರಿಯೆ | ಶ್ರೀಮನ್ಮಂತ್ರಾಲಯ ದೊರೆಯೆ | ಅಂತರಂಗದೊಳು ನಿಂತು ಪ್ರೇರಿಸುವ | ಅನಂತಾಧ್ರೀಶ ದೊರೆಯೆ |೩|
ದಾಸ ಸಾಹಿತ್ಯ ಪ್ರಕಾರ
ಬರೆದವರು