ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು
ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ|
ಮಾತ್ಯರೀಷನ ಪ್ರೀತನಾಗಿ ಬಲು | ತಾತನು ಸುಲಭದಿ ವಲಯವನು |
ಕೋತಿಯ ರೂಪದಿ ಭೂತಳದೀ ಬಲು | ಖ್ಯಾತಿಯ ಪಡೆದ ರಾಮದೂತನ ಸೇವೆಯು |೧|
ಹರನ ಭಕುತ ಜರಾಸಂಧನ ಕಾಯವ | ತರಿದು ಮುರಿದು ಬಲು ಸುಲಭದಲಿ |
ಹರಿಗಪರೋಕ್ಷದಿ ಅರ್ಪಣೆ ಮಾಡಿದ | ಕುರುಕುಲ ಪತಿ ಭೀಮನ ಸೇವೆಯು |೨|
ಶುದ್ಧ ದ್ವಿಜ ಕುಲದಿ ಉದ್ಧರಿಸಿ | ಅನಿರುದ್ಧಗೆ ಅನುಮತವಾಗಿರುವ |
ಸಿದ್ಧಾಂತದ ಪದ್ಧತಿಯನು ತೋರಿದ | ಮಧ್ವಮತದ ತತ್ವದಲ್ಲಿ ಪ್ರಸನ್ನತೆ |೩|
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments