ಏಳೆಲೋ ರಂಗೇಶ

(ರಾಗ ಪುನ್ನಾಗವರಾಳಿ ರೂಪಕತಾಳ) ಏಳೆಲೋ ರಂಗೇಶ , ಏಳೆಲೋ ಜಗದೀಶ ||ಪ|| ಸಂಸಾರಾಂಭುಧಿಯಲ್ಲಿ , ಶರೀರವೆಂಬೋ ಪಾಡೆಯಲ್ಲಿ ||ಅ|| ಕಂಸಾರಿ ವ್ಯವಹಾರಿ , ಕಡುಲೋಭಿ ಜೀವಶೆಟ್ಟಿ ಕಾಲವೆಂಬೊ ಕಳ್ಳಪಾಡೆ , ಕಲಹಂಸಾವುಂಡಿರುವ ಕ್ರೂರನೆಂಬೊ ಕಳ್ಳ ಬಂಟ, ಕಿಡಿಗೇಡಿ ನೋಡುತಿಹ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಚ್ಚರಿಕೆ ಎಚ್ಚರಿಕೆ ಮನವೆ

(ರಾಗ ಯದುಕುಲಕಾಂಭೋಜ ಅಟತಾಳ) ಎಚ್ಚರಿಕೆ ಎಚ್ಚರಿಕೆ ಮನವೆ ||ಪ|| ಅಚ್ಯುತನ ಪಾದಾರವಿಂದ ಧ್ಯಾನದಲಿ ||ಅ|| ತೊಗಲುಚೀಲೊಂಭತ್ತು ಹರಕು , ಬಹು ಬಿಗಿದ ನರಗಳು ಎಲುವುಗಳ ಸಿಲುಕು ಮಿಗೆ ರಕ್ತಮಾಂಸದ ಹೊಳಕು, ಒ- ಳಗೆ ಕಫ ವಾತ ಪಿತ್ತದ ಸರಕು || ಆಶೆ ಪಾಶದೊಳಗೆ ಸಿಲುಕಿ, ಬಹು-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಳಿಗೆ ಬಿದ್ದಿರುವ ಬೋಳಿಗೆ

(ರಾಗ ಸೌರಾಷ್ಟ್ರ , ಅಟತಾಳ) ಕೂಳಿಗೆ ಬಿದ್ದಿರುವ ಬೋಳಿಗೆ ನಿನಗಿಷ್ಟು ಗಯ್ಯಾಳಿತನವೇತಕೆ ||ಪ|| ಆಚಾರ ನೋಡಿದರೆ ಅಲ್ಲೇನು ಹರಡಿಲ್ಲ ಮೋಚಿ ಸಣ್ಣ ಮೊಗ ಮುಸುಕುತಿದ್ದ ವಾಚಾಮಗೋಚರ ಹರಟೆಯ ಹರಟುತ ನೀಚ ಮುಂಡೆಗೆ ನೇಮನಿಷ್ಠೆಗಳೆ || ಲಕ್ಷ ಬತ್ತಿಯ ಮಾಡಿ ಲಕ್ಷ ನಮಸ್ಕರಿಸಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೂಗದೆ ಉಸಿರಿಕ್ಕದೆ ನೀವು

( ರಾಗ ಪಂತುವರಾಳಿ ಅಟತಾಳ) ಕೂಗದೆ ಉಸಿರಿಕ್ಕದೆ, ನೀವು , ಬೇಗ ಬೇಗನೆ ಬನ್ನಿ , ರಂಗ ಮನೆಯ ಪೊಕ್ಕ ||ಪ|| ಸೂರಿ ಕೆಳಗೆ ನಿಂದಾರಿಸಿ ತನ್ನ ವಾರಿಗೆಯ ಮಕ್ಕಳನು ಕೂಡಿಸಿ ಹಾರಿ ಗೋಡೆಯ ಧುಮುಕಿ ಒಳಗೆ ಪೊಕ್ಕು ಸೂರೆಗೊಳ್ಳುತಾನೆ ಸುಮ್ಮನೆ ಬನ್ನಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ

( ರಾಗ ಪುನ್ನಾವರಾಳಿ ಛಾಪುತಾಳ ) ಕಾಲ ಕಾಳೆದೆವಲ್ಲ , ಜ್ಞಾನ ಬರಲಿಲ್ಲವಲ್ಲ ||ಪ|| ಕಾಲನವರು ಕರೆಯಬಂದರೆ ಏನು ಹೇಳಲಿ ಸೊಲ್ಲ ||ಅ|| ಬಾಲನಾಗಿ ಜನಿಸಿ , ತಾಯ ಮೊಲೆಗೆ ಭ್ರಮಿಸಿ ಹಾಲು ಬೆಣ್ಣೆ ಉಣಿಸಿ , ಹಸುಗೂಸು ಎಂದೆನಿಸಿ || ಚೆಂಡುಬುಗರಿಯಾಡಿ , ಚೆಲುವ ವಸನ ಬೇಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ

(ರಾಗ ಧನಶ್ರೀ ಅಟತಾಳ) ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ|| ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ|| ಅಡಿಗೆಮನೆಯಲ್ಲಿ ಗಡಬಡ ಬರುವುದು ಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು || ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರೆದರೆ ಓ ಎನ್ನಬಾರದೆ

(ರಾಕ ಖಮಾಚ್ ಆದಿತಾಳ) ಕರೆದರೆ ಓ ಎನ್ನಬಾರದೆ ||ಪ|| ಲಕ್ಷ್ಮೀರಮಣ, ಕರೆದರೆ ಓ ಎನ್ನಬಾರದೆ ||ಅ|| ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ ಪರಿಪರಿ ದುರಿತಗಳೆಲ್ಲಾ ಪರಿಹರಿಸಿ ಕಾಯಿದಂಥಾ ಸ್ವಾಮಿ || ಭೀಮರಥಿಯೊಳಗೊಬ್ಬ ದಾಸ ಮುಣುಗಿ ಪೋಗಿರಲು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣೆತ್ತಿ ನೋಡಲು ಬೇಡ, ಅವಳ

(ರಾಗ ದರ್ಬಾರಿ ಆದಿತಾಳ) ಕಣ್ಣೆತ್ತಿ ನೋಡಲು ಬೇಡ ||ಪ|| ಅವಳ , ಸಣ್ಣ ಬೈತಲೆ ನೋಡಿ ಮರುಳಾಗಬೇಡ ||ಅ|| ಕಣ್ಣಿಟ್ಟು ಕೀಚಕ ಕೆಟ್ಟ , ಪರ- ಹೆಣ್ಣಿಗಾಗಿ ರಾವಣ ತಲೆಕೊಟ್ಟ ಇನ್ನೆಷ್ಟು ಹೇಳಲಾ ನಷ್ಟ ಹೆಣ್ಣ ಮೋಹಿಸಿದರೆ ಬರುವೋದು ಕಷ್ಟ || ದೂಷಿಸದಿರು ದುರುಳ ಕಣ್ಣ , ಅವಳ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣಿನಿಂದ ನೋಡೋ ಹರಿಯ

(ರಾಗ ಕಾಪಿ ಛಾಪುತಾಳ) ಕಣ್ಣಿನಿಂದ ನೋಡೋ ಹರಿಯ ||ಪ|| ಒಳಗಣ್ಣಿನೊಳಗಿಂದ ನೋಡೋ ಮೂಜಗದೊಡೆಯನ ||ಅ|| ಆಧಾರ ಮೊದಲಾದ ಆರು ಚಕ್ರ ಶೋಧಿಸಿ ಬಿಡಬೇಕು ಈಷಣ ಮೂರು ಸಾಧಿಸಿ ಸುಷುಮ್ನಾ ಏರು , ಅಲ್ಲಿ ಭೇದಿಸಿ ನೀ ಪರಬ್ರಹ್ಮನ ಸೇರು || ಎವೆ ಹಾಕದೆ ಮೇಲೆ ನೋಡಿ , ಬೇಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಣ್ಣ ಮುಂದಿರೋ ರಂಗ

(ರಾಗ ಶಂಕರಾಭರಣ ಆದಿತಾಳ) ಕಣ್ಣ ಮುಂದಿರೋ, ರಂಗ, ಕಣ್ಣ ಮುಂದಿರೋ ||ಪ|| ಪೂತನಿಯ ಮೊಲೆಯನುಂಡು ವಾತಶಕಟಾದಿ ದೈತ್ಯರ ಘಾತಿಸಿದ ರಂಗ ನಿನ್ನ ಪೋಕತನಕಂಜುವೆನು || ಕಡಹದ ಮರವನೇರಿ ಮಡುವ ಧುಮುಕಿ ಕಾಳಿಂಗನ ಪೆಡೆಯ ತುಳಿದು ಅವನ ಸ್ಥಳವ ಬಿಡಿಸಿ ಬಂದೆ ಕರುಣನಿಧಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು