ಎಂಥಾ ಬಲವಂತನೋ

ಎಂಥಾ ಬಲವಂತನೋ | ಕುಂತಿಯ ಸಂಜಾತನೋ | ಭಾರತಿಗೆ ಕಾಂತನೋ | ನಿತ್ಯ ಶ್ರೀಮಂತನೋ || ಪಲ್ಲವಿ || ರಾಮಚಂದ್ರಗೆ ಪ್ರಾಣನೋ | ಅಸುರ ಹೃದಯ ಬಾಣನೋ | ಖಳರ ಗಂಟಲ ಗಾಣನೋ | ಜಗದೊಳಗೆ ಪ್ರವೀಣನೋ || ೧ || ಬಂಡಿ ಅನ್ನವನುಂಡನೋ | ಬಕನ ಪ್ರಾಣವ ಕೊಂಡನೋ | ದ್ರೌಪದಿಗೆ ಗಂಡನೋ | ಭೀಮ ಪ್ರಚಂಡನೋ || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈಸಬೇಕು ಇದ್ದು ಜೈಸಬೇಕು

ಈಸಬೇಕು-ಇದ್ದು ಜೈಸಬೇಕು| ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧|| ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲೆನೆ ವೈದಿಕ ಗಂಡನ

ರಚನೆ : ಪುರಂದರದಾಸರು ರಾಗ : ಹಂಸಾನಂದಿ ತಾಳ: ಆದಿ ಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ || ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

ಬರೆದದ್ದು : ಕನಕದಾಸರು ರಾಗ : ಅಠಾಣ ತಾಳ : ಅಟ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ || ಪಲ್ಲವಿ || ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಅನುಪಲ್ಲವಿ || ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರವಾರಿಧಿಯೊಳಿರಲು ಕರಿರಾಜ ಕಷ್ಟದಲಿ ಆದಿಮೂಲ ಎಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಳೆಯ ದಯಮಾಡೋ ರಂಗ..

ರಾಗ - ಮುಖಾರಿ ಮಳೆಯ ದಯಮಾಡೋ ರಂಗ ನಿಮ್ಮ ಕರುಣ ತಪ್ಪಿದರೆ ಉಳಿಯದು ಲೋಕ ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು ದೆಶೆದೆಶೆಗೆ ಬಾಯ್ಬಿಡುತ್ತಿಹವಯ್ಯ ಹರಿಯೆ

ಸೇವಕತನದ ರುಚಿಯನೇರಿದ್ಯೋ ಹನುಮ...

ಶ್ರೀರಾಗ - ಆದಿತಾಳ ಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ|| ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನ ಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವನಿಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ಕ್ಷಣದಲ್ಲಿ ಸಂಜೀವನ ಗಿರಿ ತಂದಾಗ

ದಾಸಾನುದಾಸ ನಾನು

ಬರೆದದ್ದು : ಕನಕದಾಸರು ರಾಗ:ಶಂಕರಾಭರಣ ತಾಳ:ಅಟ ದಾಸದಾಸರ ಮನೆಯ ದಾಸಾನುದಾಸ ನಾನು ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ || ಪಲ್ಲವಿ || ಕಾಳುದಾಸರ ಮನೆಯ ಆಳು ದಾಸ ನಾನುಯ್ಯ | ಕೀಳುದಾಸನು ನಾನು ಕಿರಿಯ ದಾಸ || ಭಾಳಾಕ್ಷ ಮುಂತಾಗಿ ಭಜಿಪ ದೇವರಮನೆಯ |

ಕಂಡೆ ನಾ ತಂಡತಂಡದ ಹಿಂಡುದೈವ

ಬರೆದದ್ದು : ಕನಕದಾಸರು ರಾಗ : ನಾಟಿ ತಾಳ:ಝಂಪೆ ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ || ಪಲ್ಲವಿ || ಘುಡಿಘುಡಿಸಿ ಕಂಬದಲ್ಲಿ ಧಡಧಡ ಸಿಡಿಲು ಸಿಡಿಯೆ ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು

ದಾಸದಾಸರ ಮನೆಯ ದಾಸಿಯರ ಮಗ ನಾನು

ಬರೆದದ್ದು : ಕನಕದಾಸರು ರಾಗ : ಕಾಂಬೋದಿ ತಾಳ : ಝಂಪೆ ದಾಸದಾಸರ ಮನೆಯ ದಾಸಿಯರ ಮಗ ನಾನು ಸಾಸಿರನಾಮದೊಡೆಯ ರಂಗಯ್ಯನ ಮನೆಯ ಶಂಕುದಾಸರ ಮನೆಯ ಮಂಕುದಾಸನು ನಾನು ಮಂಕುದಾಸನು ನಾನು ಮರುಳು ದಾಸ ಸಂಕೀರ್ತನೆಯ ಮಾಡಿ ನೆನವ ಭಕ್ತರ ಮನೆಯ

ತಲ್ಲಣಸಿದಿರು ಕಂಡ್ಯ ತಾಳು ಮನವೆ

ರಚನೆ : ಕನಕದಾಸರು ರಾಗ : ಕೇದಾರಗೌಳ ತಾಳ: ಝಂಪೆ ತಲ್ಲಣಸಿದಿರು ಕಂಡ್ಯ ತಾಳು ಮನವೆ || ಪಲ್ಲವಿ || ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅನು || ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನ್ನು ಕಟ್ಟಿ ನೀರೆರೆದವರು ಯಾರೊ