ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ (ಪಲ್ಲವಿ) ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ ಬರಲಿ) ಆರು ಅರಿಯದಿರೆಲ್ಲನ ಮುರಾರಿಯು ಎನಗೆ ಪ್ರಸನ್ನ ಘೋರ ದುರಿತದ ಬನ್ನ* ಭಯ ಹಾರಿ| ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಮ್ಮ ನಿಮ್ಮ ಮನೆಗಳಲ್ಲಿ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ|| ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ || ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆವ ಕುಲವಾದರೇನು

ರಾಗ ರೇಗುಪ್ತಿ/ಅಟ್ಟ ತಾಳ ಆವ ಕುಲವಾದರೇನು ಆವನಾದರೇನು ಆತ್ಮ ಭಾವವರಿತ ಮೇಲೆ || ಪಲ್ಲವಿ || ಹಸಿ ಕಬ್ಬು ಡೊಂಕಿರಲು ಅದರ ರಸ ತಾನು ಡೊಂಕೇನೊ ವಿಷಯಾಸೆಗಳ ಬಿಟ್ಟು ಹಸನಾದ ಗುರುಭಕ್ತಿ ಮಾಡೋ || ೧ || ರಾಗ ರೇಗುಪ್ತಿ/ಅಟ್ಟ ತಾಳ ನಾನಾ ವರ್ಣದ ಆಕಳು ಅದು ನಾನಾ ವರ್ಣದ ಕ್ಷೀರವೇನೋ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಂದಕರಿರಬೇಕಿರಬೇಕು

ರಾಗ - ನಾದನಾಮಕ್ರಿಯ ತಾಳ - ಆಟ ನಿಂದಕರಿರಬೇಕಿರಬೇಕು | ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೊ ಹಾಗೆ ||ಪಲ್ಲವಿ|| ಅಂದಂದು ಮಾಡಿದ ಪಾಪವೆಂಬ ಮಲ ತಿಂದು ಹೋಗುವರಯ್ಯ ನಿಂದಕರು || ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ ಪೊಂದಿಹ ಪುಣ್ಯವನೊಯ್ಯುವರಯ್ಯ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸೇವಕತನದ ರುಚಿಯೇನರಿದ್ಯೋ

ರಚನೆ : ಪುರಂದರದಾಸರು ಶ್ರೀರಾಗ - ಆದಿತಾಳ ಸೇವಕತನದ ರುಚಿಯೇನರಿದ್ಯೋ | ದೇವ ಹನುಮರಾಯ | ವೈರಾಗ್ಯ ಬೇಡಿದೆ ||ಪಲ್ಲವಿ|| ಉದಧಿಯ ದಾಟಿ ಸೀತೆಯ ಕ್ಷೇಮ ತಂದಾಗ ಮದುವೆಯ ಮಾಡೆನ್ನಬಾರದಿತ್ತೇ ಪದದಿ ಪಾಷಾಣವ ಪೆಣ್ಣ ಮಾಡಿದವಗೆ ಇದು ಏನಸಾಧ್ಯವೊ ಹನುಮ ನೀನೊಲ್ಲದೆ ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾರಿಗೆ ಯಾರುಂಟು ಎರವಿನ ಸಂಸಾರ

ರಾಗ ಬಿಲಹರಿ/ಅಟ್ಟ ತಾಳ ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ || ಪಲ್ಲವಿ || ಬಾಯಾರಿತು ಎಂದು ಬಾವಿನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ || ೧ || ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ || ೨ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಲಿಸೆಮ್ಮ ಮುದ್ದುಶಾರದೆ

ರಾಗ ಮುಖಾರಿ/ಆದಿ ತಾಳ ಪಾಲಿಸೆಮ್ಮ ಮುದ್ದುಶಾರದೆ ಎನ್ನ ನಾಲಿಗೆಯಲಿ ತಪ್ಪು ಬಾರದೆ || ಪಲ್ಲವಿ || ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ || ಅಕ್ಷರಕ್ಷರ ವಿವೇಕವಾ ನಿಮ್ಮ ಕುಕ್ಷಿಯೊಳೀರೇಳು ಲೋಕವ ಸಾಕ್ಷಾತು ರೂಪದಿಂದ ಒಲಿದು ರಕ್ಷಿಸು ತಾಯೆ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಗದುಧ್ಧಾರನ ಆಡಿಸಿದಳೆಶೋದೆ

ರಾಗ ಹಿಂದೂಸ್ಥಾನಿ ಕಾಪಿ/ಆದಿ ತಾಳ ಜಗದುಧ್ಧಾರನ ಆಡಿಸಿದಳೆಶೋದೆ || ಪಲ್ಲವಿ || ಜಗದುಧ್ಧಾರನ ಮಗನೆಂದು ತಿಳಿಯುತ ಸುಗುಣಾಂತರಂಗನ ಆಡಿಸಿದಳೆಶೋದೆ || ೧ || ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ || ೨ || ಅಣೋರಣೀಯನ ಮಹತೋಮಹೀಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವಕಿಕಂದ ಮುಕುಂದ

ರಾಗ ಪೀಲು/ಆದಿ ತಾಳ ದೇವಕಿಕಂದ ಮುಕುಂದ || ಪಲ್ಲವಿ || ನಿಗಮೋಧ್ಧಾರ ನವನೀತಚೋರ ಖಗಪತಿ ವಾಹನ ಜಗದೋಧ್ಧಾರ || ೧ || ಶಂಖಚಕ್ರಧರ ಶ್ರೀ ಗೋವಿಂದ ಪಂಕಜಲೋಚನ ಪರಮಾನಂದ || ೨ || ಮಕರಕುಂಡಲಧರ ಮೋಹನವೇಷ ರುಕುಮಿಣಿ ವಲ್ಲಭ ಪಾಂಡವಪೋಷ || ೩ || ಕಂಸಮರ್ದನ ಕೌಸ್ತುಭಾಭರಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಮ್ಮ ಭಾಗ್ಯ ದೊಡ್ಡದೋ

ರಾಗ ಪಂತುವರಾಳಿ/ತಾಳ ಆದಿ ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ || ಪಲ್ಲವಿ || ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ ಬನ್ನಿ || ಅನು ಪಲ್ಲವಿ || ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ || ೧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು