ಕಂಡೆ ನಾ ತಂಡತಂಡದ ಹಿಂಡುದೈವ
ಬರೆದದ್ದು : ಕನಕದಾಸರು ರಾಗ : ನಾಟಿ ತಾಳ:ಝಂಪೆ
ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು
ಗಂಡ ಉದ್ದಂಡ ನರಸಿಂಹನ ಕಂಡೆನಯ್ಯ || ಪಲ್ಲವಿ ||
ಘುಡಿಘುಡಿಸಿ ಕಂಬದಲ್ಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡಿಘುಡಿಸಿ ಸಭೆ ಬೆದರೆ
ಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ || ೧ ||
ಉರದೊಳಪ್ಪಳಿಸಿ ಅರಿ ಬಸಿರ ಸರಸರಸನೆ ಸೀಳಿ
ಪರಿಪರಿಯಲಿ ಚರ್ಮ ಎಳೆದಯೆಳೆಲುವನರ
ನರಕನೆ ನೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕೊರಳೊಳಿಟ್ಟವನ || ೨ ||
ಪುರಜನರು ಹಾಯೆಂದು ಸುರರು ಹೂಮಳೆಗೆರೆಯೆ
ತರತರದಿ ವಾದ್ಯಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೆರೆಯೆ
ಕರುಣಾಳು ಕಾಗಿನೆಲೆಯಾದಿ ಕೇಶವನ || ೩ ||
- Log in to post comments
Re: ಕಂಡೆ ನಾ ತಂಡತಂಡದ ಹಿಂಡುದೈವ