ಒಲ್ಲೆನೆ ವೈದಿಕ ಗಂಡನ
ರಚನೆ : ಪುರಂದರದಾಸರು ರಾಗ : ಹಂಸಾನಂದಿ ತಾಳ: ಆದಿ
ಒಲ್ಲೆನೆ ವೈದಿಕ ಗಂಡ ನಾ ಎಲ್ಲಾದರೂ ನೀರ ಧುಮುಕುವೆನಮ್ಮ || ಪಲ್ಲವಿ ||
ಉಟ್ಟೇನೆಂದರೆ ಇಲ್ಲ, ತೊಟ್ಟೇನೆಂದರೆ ಇಲ್ಲ, ಕೆಟ್ಟ ಸೀರೆಯನು ನಾನು ಉಡಲಾರೆನೇ
ಹಿಟ್ಟು ತೊಳಸಿ ಎನ್ನ ರಟ್ಟೆಲ್ಲ ನೊಂದವು ಎಷ್ಟಂತ ಹೇಳಲಿ ಕಷ್ಟದ ಒಗೆತನ || ಚರಣ ೧ ||
ಕೃಷ್ಣಾಜಿನವನ್ನು ರಟ್ಟೇಲಿ ಹಾಕಿಕೊಂಡು ಬೆಟ್ಟಲ್ಲಿ ಗಿಂಡಿಯ ಹಿಡಿದಿಹನೇ
ದಿಟ್ಟತನದಿ ನಾನೆದುರಿಗೆ ಹೋದರೆ ದೃಷ್ಟಿಯಿಂದಲಿ ಎನ್ನ ನೋಡನಮ್ಮ || ಚರಣ ೨ ||
ನಿನ್ನಾಣೆ ಹುಸಿಯಲ್ಲ, ಬಿನ್ನಾಣ ಮಾತಲ್ಲ, ಕಣ್ಣುಸನ್ನೆಯಂತು ಮೊದಲೆ ಇಲ್ಲಾ,
ಮುನ್ನಿನ ಜನ್ಮದಲ್ಲಿ ಪುರಂದರ ವಿಠಲನ ಚೆನ್ನಾಗಿ ಪೂಜೆಯ ಮಾಡಲಿಲ್ಲಮ್ಮಾ || ಚರಣ ೩ ||
- Log in to post comments