ಈಸಬೇಕು ಇದ್ದು ಜೈಸಬೇಕು
ಈಸಬೇಕು-ಇದ್ದು ಜೈಸಬೇಕು|
ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ||
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧||
ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ|
ಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ||೨||
ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು |
ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments
Re: ಈಸಬೇಕು ಇದ್ದು ಜೈಸಬೇಕು
In reply to Re: ಈಸಬೇಕು ಇದ್ದು ಜೈಸಬೇಕು by deepakbs
Re: ಈಸಬೇಕು ಇದ್ದು ಜೈಸಬೇಕು
In reply to Re: ಈಸಬೇಕು ಇದ್ದು ಜೈಸಬೇಕು by shreekant.mishrikoti
Re: ಈಸಬೇಕು ಇದ್ದು ಜೈಸಬೇಕು