ಬೀಜ ಮೂರನು ಬಿತ್ತಿ ಸಾಜ ಬೀಜವ ತೋರಿರಿ

ರಾಗ: ಸೌರಾಷ್ಟ್ರ ತಾಳ: ಮಟ್ಟೆ ಬೀಜ ಮೂರನ್ನು ಬಿತ್ತಿ ಸಾಜಬೀಜವ ತೋರಿರಿ ರಾಜರಿಗೆ ಒಂದು ಫಲ ರಾಜ್ಯಕ್ಕೆ ಎರಡು || ಬೀಜ ಕರಿದಕೆ ಕಾಲು ಬೀಜ ಬಿಳಿದಕೆ ಮೋರೆ ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು ರಂಜಕದ ಬೇರಿಗೆ ರಾಗ ಮುವತ್ತೆರಡು ಕುಂಜರದಗಮನೆ ಕೋವಿದನರಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ

ರಾಗ: ಮೋಹನ ತಾಳ: ಅಟ ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏಳು ನಾರಾಯಣ ಏಳು ಲಕ್ಷ್ಮೀರಮಣ

ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿಗೊಡೆಯ ಶ್ರೀವೆಂಕಟೇಶ ಏಳಯ್ಯ ಬೆಳಗಾಯಿತು || ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು ದೇಶ ಕೆಂಪಾಯಿತು ಏಳಯ್ಯ ಹರಿಯೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಷ್ಟು ದಿನ ಈ ವೈಕುಂಠ

ಇಷ್ಟು ದಿನ ಈ ವೈಕುಂಠ

ಎಷ್ಟು ದೂರವೋ ಎನುತಲಿದ್ದೆ

ದೃಷ್ಟಿಯಿಂದಲಿ ನಾನು ಕಂಡೆ

ಸೃಷ್ಟಿಗೀಶನೇ ಶ್ರೀರಂಗಶಾಯಿ ||

 

ಎಂಟು ಏಳನು ಕಳೆದುದರಿಂದ

ಬಂಟರೈವರ ತುಳಿದುದರಿಂದ

ಕಂಟಕನೊಬ್ಬನ ತರಿದುದರಿಂದ

ಬಂಟನಾಗಿ ಬಂದನೋ ಶ್ರೀರಂಗಶಾಯಿ ||

 

ವನ ಉಪವನಗಳಿಂದ

ಘನ ಸರೋವರಗಳಿಂದ

ಕನಕ ಗೋಪುರಗಳಿಂದ

ಘನಶೋಭಿತನೆ ಶ್ರೀರಂಗಶಾಯಿ ||

 

ವಜ್ರ ವೈಢೂರ್ಯದ ತೊಲೆಗಳ ಕಂಡೆ

ಪ್ರಜ್ವಲಿಪ ಮಹಾದ್ವಾರವ ಕಂಡೆ

ನಿರ್ಜರಾದಿ ಮುನಿಗಳ ಕಂಡೆ

ದುರ್ಜನಾಂತಕನೆ ಶ್ರೀರಂಗಶಾಯಿ ||

 

ರಂಭೆ ಊರ್ವಶಿಯರ ಮೇಳವ ಕಂಡೆ

ತುಂಬುರು ಮುನಿ ನಾರದರನು ಕಂಡೆ

ಅಂಬುಜೋದ್ಭವ ರುದ್ರರ ಕಂಡೆ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸರಾದರು.
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲ್ಲುಸಕ್ಕರೆ ಕೊಳ್ಳಿರೋ

ರಾಗ - ಕಲ್ಯಾಣಿ ತಾಳ - ಆಟ ಕಲ್ಲುಸಕ್ಕರೆ ಕೊಳ್ಳಿರೊ-ನೀವೆಲ್ಲರು ಕಲ್ಲುಸಕ್ಕರೆ ಕೊಳ್ಳಿರೊ ||ಪ|| ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಕೃಷ್ಣನ ದಿವ್ಯನಾಮವೆಂಬ ||೧|| ಎತ್ತು ಹೇರುವುದಲ್ಲ ಹೊತ್ತು ಮಾರುವುದಲ್ಲ ಒತ್ತೊತ್ತಿ ಗೋಣಿಯ ತುಂಬುವುದಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೂ ಬೇಕೆ ಪರಿಮಳದಾ?

ಪಲ್ಲವಿ: ಹೂ ಬೇಕೆ ಪರಿಮಳದಾ? ಪರಮ ಪುರುಷ ನಮ್ಮ ಕೃಷ್ಣನ ತೋಟದ! ಮಲ್ಲಿಗೆ ಸಂಪಿಗೆ ಜಾಜಿ ಶಾವಂತಿಗೆ ಮಲ್ಲೆ ಗುಲಾಬಿ ತಾವರೆ ಪಾರಿಜಾತ ಎಲ್ಲ ವಿಧದ ಮನಕ್ಲೇಶವ ಕಳೆಯುವ ಪುಲ್ಲನಾಭ ನಮ್ಮ ಕೃಷ್ಣನ ತೋಟದ! || ಹೂ ಬೇಕೆ ?|| ದಾರದಿ ಕಟ್ಟಿಲ್ಲ ಮಾರು ಹಾಕುವುದಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇನ್ನೇನಿನ್ನೇನು?

ರಾಗ: ಸೌರಾಷ್ಟ್ರ ತಾಳ: ಝಂಪೆ ಮಾಯದ ಸಂಸಾರ ಮಮಕಾರ ಹಿಂಗಿತು ಇನ್ನೇನಿನ್ನೇನು ||ಪ|| ತೋಯಜಾಕ್ಷನ ದಯ ನಮಗೀಗ ದೊರಕಿತು ಇನ್ನೇನಿನ್ನೇನು ||ಅ.ಪ|| ಭಾವಿಸಿದ್ದೆಲ್ಲವು ಭೂಮಿಪಾಲಾದ ಮೇಲಿನ್ನೇನಿನ್ನೇನು ಸೇವಿಸಿದ ಗಣಪ ಮಂಗನಾದ ಮೇಲಿನ್ನೇನಿನ್ನೇನು ||೧||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ| ನಿತ್ಯ ಶುಭ ಮಂಗಳಂ| ತನ್ನ ನೋಡೇನೆಂದು ಮುನ್ನೂರು ಗಾವುದ ಬರಲು ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ |
ದಾಸ ಸಾಹಿತ್ಯ ಪ್ರಕಾರ
ಬರೆದವರು