ಗುಮ್ಮನ ಕರೆಯದಿರೆ

(ರಾಗ ಶಂಕರಾಭರಣ ಅಟತಾಳ) ಗುಮ್ಮನ ಕರೆಯದಿರೆ , ಅಮ್ಮ ನೀನು ಗುಮ್ಮನ ಕರೆಯದಿರೆ ||ಪ|| ಸುಮ್ಮನೆ ಇದ್ದೇನು, ಅಮ್ಮಿಯ ಬೇಡೆನು ಮಮ್ಮು ಉಣುತೇನೆ , ಅಮ್ಮ ಅಳುವುದಿಲ್ಲ || ಅ || ಹೆಣ್ಣುಗಳಿರುವಲ್ಲಿಗೆ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು , ಅಣ್ಣನ ಬೈಯೆನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜಿಕಿನ್ನಾತಕಯ್ಯ , ಸಜ್ಜನರಿಗೆ

(ರಾಗ ಕಲ್ಯಾಣಿ ಅಟತಾಳ) ಅಂಜಿಕಿನ್ನಾತಕಯ್ಯ , ಸಜ್ಜನರಿಗೆ ಅಂಜಿಕಿನ್ನಾತಕಯ್ಯ ||ಪ|| ಸಂಕ್ಜೀವರಾಯರ ಸ್ಮರಣೆ ಮಾಡಿದ ಮೇಲೆ || ಅ.ಪ.|| ಕನಸಿಲಿ ಮನಸಿಲಿ ಕಳವಳವಾದರೆ ಹನುಮನ ನೆನೆದರೆ ಹಾರಿಹೋಗದೆ ಪಾಪ || ರೋಮರೋಮಕೆ ಕೋಟಿ ಲಿಂಗವುದುರಿಸಿದ ಭೀಮನ ನೆನದರೆ ಬಿಟ್ಟು ಹೋಗದೆ ಪಾಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಕ್ಕಲಾರೆ ಕೈ ಎಂಜಲು

(ರಾಗ ಪೂರ್ವಿ ಅಟತಾಳ) ಇಕ್ಕಲಾರೆ ಕೈ ಎಂಜಲು , ಚಿಕ್ಕ ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ|| ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯ ತನಯರು ಅಳುತಾರೆ , ನಿನದೇನು ಕಾಟವು ಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾಸು ಬಾರಿಸುತಿದೆ ಕೇಳಿ

(ರಾಗ ಮಧ್ಯಮವತಿ ಆದಿತಾಳ) ತಾಸು ಬಾರಿಸುತಿದೆ ಕೇಳಿ | ಹರಿದಾಸರೆಲ್ಲ || ಪ || ಶ್ರೀಶನ ಭಜನೆಯ ಮಾಡದ ಮನುಜನ ಆ | ಯುಷ್ಯವು ವ್ಯರ್ಥ ಹೋಯಿತು ಎಂದು ||ಅ.ಪ|| ಹಾಸು ಮಂಚ ಸುಪ್ಪತ್ತಿಗೆಯಲ್ಲಿ | ಹಗಲು ಇರುಳು | ಹೇಸರಗತ್ತೆಯಂತೆ ಹೊರಳಿ | ಸ್ತ್ರೀಯರ ಕೂಡಿ |
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಗರಗಡೆಯ ಮಾಡಿ

ಸಾಗರಗಡೆಯ ಮಾಡಿ ಧರೆಯ ಕೂರಿಗೆ ಮಾಡಿ | ಹರಬ್ರಹ್ಮರೆಂಬೊ ಎರಡೆತ್ತು ಹೂಡಿ | ನರರೆಂಬೊ ಬೀಜವ ಬಿತ್ತಿ ಧರೆಯೊಳಗೆ | ಇಂದ್ರ ಬೆಳೆಸುವಾತ ಚಂದ್ರ ಕಳೆ ಕೀಳಿಸುವಾತ | ಯಮರಾಯನಯ್ಯ ಬಿತ್ತಿದ ಬೆಳಸೆಲ್ಲ | ಎತ್ತಿಕೊಂಡು ಹೋದಾಗ | ದುಃಖ ಪಡಬೇಡೆಂದನು ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಈಸಬೇಕು ಇದ್ದು ಜಯಿಸಬೇಕು

ಈಸಬೇಕು ಇದ್ದು ಜಯಿಸಬೇಕು ||ಪ|| ಹೇಸಿಗೆ ಸಂಸಾರದಲ್ಲಿ ಆಶಾಲೇಶ ಇಡದ್ಹಾಂಗ ||ಅ.ಪ.|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಎಂದಿಗಾಹುದೋ ನಿನ್ನ ದರ್ಶನ

ರಾಗ: ಆರಭಿ ರೂಪಕ ತಾಳ ಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.|| ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕ ಆರಿಗೆ ಮೊರೆಯಿಡಲೊ ದೇವನೆ ಸಾರಿ ಬಂದು ನೀ ಕಾಯೊ ಬೇಗನೆ ಗಜವ ಪೊರೆದೆಯೊ ಗರುಡ ಗಮನನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುಂಗ ಭುಜಂಗನ ಫಣಿಯಲಿ ಕುಣಿದನು

ತುಂಗ ಭುಜಂಗನ ಫಣಿಯಲಿ ಕುಣಿದನು || ಪ || ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. || ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ ಕಣ ಕಣವೆಂಬ ಸುನಾದ ಮೃದಂಗವ ಝಣಿ ಝಣಿಸುವ ಕಂಜರಿ ನಾದಗಳನು ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು ಗಗನವ ತುಂಬಿ ತುಂಬುರು ಗಂಧರ್ವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇವು ಬೆಲ್ಲದೊಳಿಡಲೇನು ಫಲ

(ರಾಗ ಬೇಹಾಗ್ ಆದಿತಾಳ) ಬೇವು ಬೆಲ್ಲದೊಳಿಡಲೇನು ಫಲ ? ಹವಿಗೆ ಹಾಲೆರೆದೇನು ಫಲ ? ||ಪ|| ಕುಟಿಲವ ಬಿಡದಿಹ ಕುಜನರು ಮಂತ್ರದ ಪಠನವ ಮಾಡಿದರೇನು ಫಲ ? | ಸಟೆಯನ್ನಾಡುವ ಮನುಜರು ಮನದಲಿ ವಿಠಲನ ನೆನೆದರೇನು ಫಲ? || ಕಪಟತನದಿ ವಂಚಿಸುವ ಮನುಜರು ಜಪಗಳ ಮಾಡಿದರೇನು ಫಲ? |
ದಾಸ ಸಾಹಿತ್ಯ ಪ್ರಕಾರ
ಬರೆದವರು

ದೇವ ಬಂದ ನಮ್ಮ ಸ್ವಾಮಿ ಬಂದನೋ

( ರಾಗ ಶಂಕರಾಭರಣ ಆದಿತಾಳ) ದೇವ ಬಂದ ನಮ್ಮ ಸ್ವಾಮಿ ಬಂದನೋ ದೇವರ ದೇವ ಶಿಖಾಮಣಿ ಬಂದನೋ ||ಪ|| ಉರಗ ಶಯನ ಬಂದ ಗರುಡ ಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ || ಮಂದರಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ || ಪೂತನಿ ಸಂಹರಣ ಬಂದ ಪುರುಹೂತವಂದ್ಯ ಬಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು