'ಕೃಷ್ಣಲೀಲೆ'

ಎಲ್ಲಡಗಿದನೊ ಹರಿ, ಎನ್ನಯ ದೊರಿ

ತೋಡಿ ರಾಗ, ಆದಿ ತಾಳ ಎಲ್ಲಡಗಿದನೊ ಹರಿ, ಎನ್ನಯ ದೊರಿ ||ಪಲ್ಲವಿ|| ಎಲ್ಲೆಲ್ಲೂ ಪರಿಪೂರ್ಣನೆಂಬೋ ಸೊಲ್ಲನು ಮುನ್ನ ಅಲ್ಲಲ್ಲಿ ಪುಸಿಮಾಡಿ ಫುಲ್ಲಲೋಚನ ಕೃಷ್ಣ ||೧|| ಶರಣೆಂದವರ ಕಾಯ್ವ ಕರುಣ ಸಮುದ್ರನು ಕರುಣವನರಿಯದೆ ಹರಿಣಾಂಕ ನಿಭವ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುಂಗ ಭುಜಂಗನ ಫಣಿಯಲಿ ಕುಣಿದನು

ತುಂಗ ಭುಜಂಗನ ಫಣಿಯಲಿ ಕುಣಿದನು || ಪ || ಮಂಗಳ ಮೂರುತಿ ರಂಗ ಶ್ರೀ ಕೃಷ್ಣನು || ಅ.ಪ. || ಕಿಣಿ ಕಿಣಿ ತಾಳ ಝೇಂಕರಿಸುವ ತಂಬೂರಿ ಕಣ ಕಣವೆಂಬ ಸುನಾದ ಮೃದಂಗವ ಝಣಿ ಝಣಿಸುವ ಕಂಜರಿ ನಾದಗಳನು ಅನುಸರಿಸುತ ಧಿಕ್ಕಿಟತ ಧಿಕ್ಕಿಟ ಎಂದು ಗಗನವ ತುಂಬಿ ತುಂಬುರು ಗಂಧರ್ವರು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಳುವೊದ್ಯಾತಕೊ ರಂಗ

ರಾಗ: ಭೈರವಿ ಆದಿ ತಾಳ ಅಳುವದ್ಯಾತಕೊ ರಂಗಾ | ಅತ್ತರಂಜಿಸುವ ಗುಮ್ಮಾ |ಪ| ಪುಟ್ಟಿದೇಳು ದಿವಸದಲ್ಲಿ | ದುಷ್ಟ ಪೂತನಿಯ ಕೊಂದಿ | ಮುಟ್ಟಿ ಮೊಲೆಯ ಹಾಲುಂಡ ಕಾರಣ | ದೃಷ್ಟಿ ತಾಕಿತೆ ನಿನಗೆ ಕಂದಯ್ಯ ಬಾಲಕತನದಲ್ಲಿ ಗೋ | ಪಾಲರೊಡಗೂಡಿ
ದಾಸ ಸಾಹಿತ್ಯ ಪ್ರಕಾರ
ಬರೆದವರು