ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ...

ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ಮಾರಜನಕ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು ಬಿಲ್ಲು ಹಬ್ಬವಂತೆ ಅಲ್ಲಿ ಬೀದಿ ಶೃಂಗಾರವಂತೆ ಮಲ್ಲರ ಕಾಳಗ ಮದ್ದಾನೆಯಂತೆ ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ಮಧುರಾ ಪುರಿಯಂತೆ ಅಲ್ಲಿ ಮಾವ ಕಂಸನಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಹೇವವೆಲ್ಲಿಹುದಯ್ಯ ವೈಕುಂಠಪತಿಗೆ

( ರಾಗ ಶಂಕರಾಭರಣ ಅಟತಾಳ) ಹೇವವೆಲ್ಲಿದುಹಯ್ಯ ವೈಕುಂಠಪತಿಗೆ ||ಪ || ಮೌನದಿಂ ಭಾರ್ಗವನು ಮಾತೆಯ ಶಿರ ತರಿದ || ಅ. ಪ|| ಒಬ್ಬ ಮಾವನ ಕೊಂದ , ಒಬ್ಬ ಮಾವನ ಎಸೆದ ಒಬ್ಬ ಮಾವನ ಕೂಡೆ ಕಡಿದಾಡಿದ ಒಬ್ಬ ಭಾವನ ಹಿಡಿದು ಹೆಡೆಮುಡಿಯ ಕಟ್ಟಿದ ಒಬ್ಬ ಮೈದುನಗೆ ಬಂಡಿಬೋವನಾದ || ಕುಂಭಿನಿಗೆ ಪತಿಯಾದ , ಕುಂಭಿನಿಗೆ ಸುತನಾದ ಕುಂಭಿನೀಮಗನ ಸಂಹಾರ ಮಾಡ್ದ ಅಂಬುಧಿಗೆ ಪಿತನಾದ , ಅಂಬುಧಿಗೆ ಸುತನಾದ ಅಂಬುಧಿಜಾತೆಗೆ ಸ್ವಾಮಿಯಾದ || ಬೊಮ್ಮ(?)ನಾ ಸಂಹರಿಸಿ ಅವರ ಮಕ್ಕಳನು ಈ ಮಹಿಯೊಳಗೆ ಅವರ ಹತಮಾಡಿದ ( / ಮೊಮ್ಮನನು ಮಲಗಿಸಿದ ಅವರ ಹೆಮ್ಮಕ್ಕಳನು ಯಿಮ್ಮೈಯವರಿತು ಸಂಹಾರ ಮಾಡಿದ) ರಮ್ಯ ಮೂರುತಿ ಪುರಂದರವಿಠಲ ದೇವೇಶ ಬೊಮ್ಮಮೂರುತಿಗೇಕೆ ಬಂಧುಬಳಗ ? ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ಹಿತವರು ನಿಮಗೆ ಈ ಮೂವರೊಳಗೆ ?

(ರಾಗ ಮುಖಾರಿ ಝಂಪೆತಾಳ) ಆರು ಹಿತವರು ನಿಮಗೆ ಈ ಮೂವರೊಳಗೆ ? ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? || ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಗವಳ ಯಜಮಾನಿಯೆನಿಸಿ ಭಿನ್ನವಲ್ಲದಲರ್ಧ ದೇಹವೆನಿಸುವ ಸತಿಯು ಕಣ್ಣಿನಲಿ ನೋಡಲಮ್ಮಳು ಕಾಲವಶದಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ

(ರಾಗ ಶಂಕರಾಬಾರಣ ಅಟತಾಳ) ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ|| ಆನೆ ಕುದುರೆ ಒಂಟೆ ಲೊಳಲೊಟ್ಟೆ , ಬಹು ಸೇನೆ ಭಂಡಾರವು ಲೊಳಲೊಟ್ಟೆ ಮಾನಿನಿಯರ ಸಂಗ ಲೊಳಲೊಟ್ಟೆ , ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ || ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೆಗೆ ನಿನ್ನ ಮುಸುಕವನು

(ರಾಗ ನಾದನಾಮಕ್ರಿಯೆ ) ತೆಗೆ ನಿನ್ನ ಮುಸುಕವನು ||ಪ|| ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು ||ಅ|| ಗೋವ ಕಾಯಲು ಪೋಗಿ ಧಾವತಿಪಟ್ಟು ಬಹು ದೇವಕಿದೇವಿಯೆ ಈವಾಗ ಬಂದೆನು || ಕಾಳಿಯ ಮಡುವಿಲಿ ಏಳು ಹೆಡೆಯ ಮೇಲೆ ಕಾಳಿಂಗನ ತುಳಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೂವ ತರುವರ ಮನೆಗೆ

(ರಾಗ ಕಾಂಭೋಜ ಝಂಪೆ ತಾಳ ) ಹೂವ ತರುವರ ಮನೆಗೆ ಹುಲ್ಲ ತರುವ ಅವ್ವೆ ಲಕುಮಿಪತಿ ಇವಗಿಲ್ಲ ಗರುವ || ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮನದಲಿ ಸಾಧುಶಯನ ಮುಕುಂದ ಎನೆ ಎಂದೆಂದು ವಾಸಿಪನಾಮಂದಿರದೊಳಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನುಗಾಲವು ಚಿಂತೆ ಜೀವಕ್ಕೆ

(ರಾಗ ಕಾಪಿ ಅಟತಾಳ) ಅನುಗಾಲವು ಚಿಂತೆ ಜೀವಕ್ಕೆ | ತನ್ನ ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ ಮತಿಹೀನ ಸತಿಯಾದರು ಚಿಂತೆಯು ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ ಮಿತಿಮೇರೆಯಿಲ್ಲದ ಮೋಹದ ಚಿಂತೆಯು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡು ಬೇಗ ದಿವ್ಯ ಮತಿ

ರಾಗ: ವಸಂತ ಆದಿತಾಳ ಕೊಡು ಬೇಗ ದಿವ್ಯ ಮತಿ ಸರಸ್ವತಿ ಮೃಡ ಹರಿ ಹಯ ಮುಖರೊಡೆಯಳೆ ನಿನ್ನಯ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ | ಇಂದಿರಾರಮಣನ ಹಿರಿಯ ಸೊಸೆಯು ನೀನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ | ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ

(ರಾಗ ಕಲ್ಯಾಣಿ ಅಟತಾಳ) ಕಲ್ಲು ಸಕ್ಕರೆ ಕೊಳ್ಳಿರೋ ,ನೀವೆಲ್ಲರೂ ಕಲ್ಲು ಸಕ್ಕರೆ ಕೊಳ್ಳಿರೋ|| ಪ|| ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು ಪುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ || ಅ.ಪ|| ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒತ್ತ್ಯೊತ್ತಿ ಗೋಣಿಯೋಳ್ ತುಂಬುವುದಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸತ್ಯವಂತರಿಗಿದು ಕಾಲವಲ್ಲ

( ರಾಗ ಮುಖಾರಿ ಝಂಪೆತಾಳ) ಸತ್ಯವಂತರಿಗಿದು ಕಾಲವಲ್ಲ ||ಪ|| ದುಷ್ಟಜನರಿಗೆ ಸುಭಿಕ್ಷಕಾಲ || ಹರಿಸ್ಮರಣೆ ಮಾಡುವಗೆ ಕ್ಷಯವಾಗುವ ಕಾಲ ಪರಮಪಾಪಿಗಳಿಗೆ ಸುಭಿಕ್ಷಕಾಲ ಸ್ಥಿರವಾದ ಪತಿವ್ರತೆಯ ಪರರು ನಿಂದಿಪ ಕಾಲ ಧರೆಗೆ ಜಾರೆಯಳ ಕೊಂಡಾಡುವ ಕಾಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು