ತಾಸು ಬಾರಿಸುತಿದೆ ಕೇಳಿ

ತಾಸು ಬಾರಿಸುತಿದೆ ಕೇಳಿ

(ರಾಗ ಮಧ್ಯಮವತಿ ಆದಿತಾಳ) ತಾಸು ಬಾರಿಸುತಿದೆ ಕೇಳಿ | ಹರಿದಾಸರೆಲ್ಲ || ಪ || ಶ್ರೀಶನ ಭಜನೆಯ ಮಾಡದ ಮನುಜನ ಆ | ಯುಷ್ಯವು ವ್ಯರ್ಥ ಹೋಯಿತು ಎಂದು ||ಅ.ಪ|| ಹಾಸು ಮಂಚ ಸುಪ್ಪತ್ತಿಗೆಯಲ್ಲಿ | ಹಗಲು ಇರುಳು | ಹೇಸರಗತ್ತೆಯಂತೆ ಹೊರಳಿ | ಸ್ತ್ರೀಯರ ಕೂಡಿ | ಬೇಸರಪಡದೆ ನಿತ್ಯ ಉರುಳಿ | ಈ ಪರಿಯಲಿ | ಮನುಷ್ಯ ಆಯುಷ್ಯ ವೃಥಾ ವೃಥಾ ಹೋಯಿತು ಎಂದು || ಬಾಲ್ಯ ಯೌವನ ವೃದ್ಧಕಾಲ | ವಿವೇಕವಿಲ್ಲದೆ | ಹಾಳಾಗಿ ಹೋಯಿತು ವ್ಯರ್ಥಕಾಲ | ಆಹಾರ ತಿಂದು | ಭಾಳಾ ನಿದ್ರೆಯಿಂದ ಅತಿಲೋಲ | ಈ ಪರಿಯಿಂದಲಿ | ಕಾಲನ ಮನೆಯು ಸಮೀಪವಾಯಿತು ಆಯಿತು ಎಂದು || ಕಂಡ ಕಂಡ ವಿಷಯವ ಕಾಮಿಸಿ |ಕಷ್ಟವ ಪಡದೆ | ತಾಂಡವ ಶ್ರೀಕೃಷ್ಣನ ಭಜಿಸಿ | ಪುಂಡರೀಕಾಕ್ಷ | ಪುರಾಣಪುರುಷನ ಪುರಂದರವಿಠಲನ | ಭಜಿಸಿ ಬದುಕೆಂದು ಢಣ್ ಢಣ್ ಢಣಾ ಎಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು