ಎಂದಿಗಾಹುದೋ ನಿನ್ನ ದರ್ಶನ

ಎಂದಿಗಾಹುದೋ ನಿನ್ನ ದರ್ಶನ

ರಾಗ: ಆರಭಿ ರೂಪಕ ತಾಳ ಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.|| ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕ ಆರಿಗೆ ಮೊರೆಯಿಡಲೊ ದೇವನೆ ಸಾರಿ ಬಂದು ನೀ ಕಾಯೊ ಬೇಗನೆ ಗಜವ ಪೊರೆದೆಯೊ ಗರುಡ ಗಮನನೆ ತ್ರಿಜಗಭರಿತ ಶ್ರೀ ವಿಜಯ ವಿಠ್ಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು