ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ

(ರಾಗ ಬೇಹಾಗ್ ಆದಿತಾಳ) ಬೇವು ಬೆಲ್ಲದೊಳಿಡಲೇನು ಫಲ ? ಹವಿಗೆ ಹಾಲೆರೆದೇನು ಫಲ ? ||ಪ|| ಕುಟಿಲವ ಬಿಡದಿಹ ಕುಜನರು ಮಂತ್ರದ ಪಠನವ ಮಾಡಿದರೇನು ಫಲ ? | ಸಟೆಯನ್ನಾಡುವ ಮನುಜರು ಮನದಲಿ ವಿಠಲನ ನೆನೆದರೇನು ಫಲ? || ಕಪಟತನದಿ ವಂಚಿಸುವ ಮನುಜರು ಜಪಗಳ ಮಾಡಿದರೇನು ಫಲ? | ಕುಪಿತಬುದ್ಧಿಯನು ತ್ಯಜಿಸದೆ ನಿತ್ಯದಿ ಉಪವಾಸವಿದ್ದರಿನ್ನೇನು ಫಲ ? || ಮಾತಾಪಿತರನು ಬಳಲಿಸುವ ಮಗ ಯಾತ್ರೆಯ ಮಾಡಿದರೇನು ಫಲ ? | ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ ? || ಪತಿಯನು ನಿಂದಿಸಿ ಬೊಗಳುವ ಸತಿಯಳು ವ್ರತಗಳ ಮಾಡಿದರೇನು ಫಲ ? | ಅತಿಥಿಗಳೆಡೆಯಲಿ ಭೇದವ ಮಾಡುತ ಗತಿಯನು ಬಯಸಿದರೇನು ಫಲ ? || ಹೀನಕೃತ್ಯಗಳ ಮಾಡುತ ನದಿಯಲಿ ಸ್ನಾನವ ಮಾಡಿದರೇನು ಫಲ ? | ಶ್ರೀನಿಧಿ ಪುರಂದರವಿಠಲನ ನೆನೆಯದೆ ಮೌನವ ಮಾಡಿದರೇನು ಫಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು