ದಾಸನ ಮಾಡಿಕೋ ಎನ್ನ

(ರಾಗ ನಾದನಾಮಕ್ರಿಯೆ ಅಟತಾಳ) ದಾಸನ ಮಾಡಿಕೋ ಎನ್ನ , ಸ್ವಾಮಿ ಸಾಸಿರನಾಮದ ವೆಂಕಟರಮಣ || ದುರ್ಬುದ್ಧಿಗಳನೆಲ್ಲ ಬಿಡಿಸೋ , ನಿನ್ನ ಕರುಣಕವಚವೆನ್ನ ಹರಣಕ್ಕೆ ತೊಡಿಸೋ ಚರಣಸೇವೆ ಎನಗೆ ಕೊಡಿಸೋ , ಅಭಯ - ಕರಪುಷ್ಪವನೆನ್ನ ಶಿರದಲ್ಲಿ ಮುಡಿಸೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬುದ್ಧಿವಂತನಲ್ಲ ರಂಗನು

(ರಾಗ ಪಂತುವರಾಳಿ ಅಟತಾಳ ) ಬುದ್ಧಿವಂತನಲ್ಲ ರಂಗನು ||ಪ|| ಮುದ್ದು ಮಾಡಿ ಸಲಹಿದೆ ಗೋಪಿ ||ಅ.ಪ|| ಆವು ಕಾಯ ಹೋಗಿ ಯಮುನಾ ತೀರದಲಿ ಮ- ಡುವ ಧುಮುಕಿ ಕಾಳಿಂಗನ ಪೆಡೆ ತುಳಿದನೆ || ಹೆಡೆಯ ತುಳಿದು ಹಾವಿನ ಮೇಲೆ ಮಲಗಿ ಕಡುನಿದ್ರೆಗೈವನು ಸಾಧು ಬಾಲಕನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುತ್ತು ಕೊಳ್ಳಿರೋ

(ರಾಗ ಪಂತುವರಾಳಿ ಆದಿತಾಳ ) ಮುತ್ತು ಕೊಳ್ಳಿರೋ , ಜನರು ಮುತ್ತು ಕೊಳ್ಳಿರೋ ||ಪ|| ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ||ಅ. ಪ|| ಜ್ಞಾನವೆಂಬೋ ದಾರದಲ್ಲಿ ಪೋಣಿಸಿದ ದಿವ್ಯ ಮುತ್ತು ಧ್ಯಾನದಿಂದ ಕೊಂಬುದಿದನು ದೀನರಾದ ಭಕ್ತಜನರು || ಕಟ್ಟಲಾಗದು ಮೂಗಿನಲ್ಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಕೋ ನಮ್ಮ ಸ್ವಾಮಿ

( ರಾಗ ಸಂಕರಾಭರಣ ಅಟತಾಳ ) ಇಕೋ ನಮ್ಮ ಸ್ವಾಮಿ ಜಗಂತರ್ಯಾಮಿ || ಒಳಗೆ ನೋಡಿ ನಿಮ್ಮ ಹೊಕ್ಕುವ ಪರಬೊಮ್ಮ ಅಳಿಯಬೇಕೋ ಹಮ್ಮ ತಿಳಿಯಬೇಕೋ ಧರ್ಮ || ವಸ್ತು ಬಿಟ್ಟು ನೋಡಿ ಸ್ವಸ್ಥದಿ ಮನನ ಮಾಡಿ ಅಸ್ತವ್ಯಸ್ತಡ್ಡಾಡಿ ಸ- ಮಸ್ತರೊಡಗೂಡಿ || ಮುಟ್ಟಿ ಗುರುಧ್ಯಾನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮುಯ್ಯಕ್ಕೆ ಮುಯ್ಯಿ ತೀರಿತು

(ರಾಗ ಪೂರ್ವಿ ಅಟತಾಳ ) ಮುಯ್ಯಕ್ಕೆ ಮುಯ್ಯಿ ತೀರಿತು , ಜಗ- ದಯ್ಯ ವಿಜಯ್ಯ ಸಾಹಯ್ಯ ಪಂಢರಿರಾಯ || ಸಣ್ಣವನೆಂದು ನಾ ನೀರು ತಾರೆಂದರೆ ಬೆಣ್ಣೆಕಳ್ಳ ಕೃಷ್ಣ ಮರವೆ ಮಾಡಿ ಚಿನ್ನದ ಗಿಂಡಿಲಿ ನೀರು ತಂದಿಟ್ಟರೆ ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾಡು ಸಿಕ್ಕದಲ್ಲಾ

(ರಾಗ ಪಂತುವರಾಳಿ ಏಕತಾಳ ) ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ | ಜೋಡಿ ಹೆಂಡ್ರಂಜಿ ಓಡಿಹೋಗುವಾಗ ಗೋಡೆ ಬಿದ್ದು ಬಯಲಾಯಿತಲ್ಲ || ಎಚ್ಚರಗೊಳಲಿಲ್ಲಾ , ಮನವೇ ಹುಚ್ಚನಾದೆನಲ್ಲಾ | ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು ಕಿಚ್ಚೆದ್ದುಹೋಯಿತಲ್ಲಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ

(ರಾಗ ಸೌರಾಷ್ಟ್ರ ಛಾಪುತಾಳ ) ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ ತಾರೇ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ || ರಾಮನಾಮವೆಂಬೋ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ ಕಾಮಿನಿಯರ ಕೂಡ ಏಕಾಂತವಾಡೇನು ತಾರೇ ಬಿಂದಿಗೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಯಮಾಡೋ ದಯಮಾಡೋ ರಂಗ

(ರಾಗ ಮಧ್ಯಮಾವತಿ ಆದಿತಾಳ ) ದಯಮಾಡೋ ದಯಮಾಡೋ , ರಂಗ ದಯಮಾಡೋ ನಿನ್ನಾ ದಾಸ ನಾನೆಂದು || ಹಲವು ಕಾಲದಿಂ ನಿನ್ನ ಹಂಬಲ ಎನಗೆ ಒಲಿದು ಪಾಲಿಸಬೇಕು ವಾರಿಜನಾಭ || ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸರ್ವದಾ ತೋರಿ ಕರುಣ || ಕರಿರಾಜವರದನೆ ಕಾಮಿತಫಲದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಗೆಯು ಬರುತಿದೆ

(ರಾಗ ಪಂತುವರಾಳಿ ಏಕತಾಳ) ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ ||ಪ || ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು || ಅ. ಪ|| ಪರರ ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು ಹರಿವ ನೀರಿನೊಳಗೆ ಮುಳುಗಿ ಬೆರಳ ಎಣಿಸುತಿಹರ ಕಂಡು || ಪತಿಯ ಸೇವೆ ಬಿಟ್ಟು ಪರ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ

(ರಾಗ ಪಂತುವರಾಳಿ ಅಟತಾಳ) ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ- ವಿಂದ ನೀನಲ್ಲದೆ ಇಹಪರವಿಲ್ಲ || ಪರರ ಬೇಡಿಪ್ಪಂತೆ ಗತಿಯಾಯಿತಲ್ಲ ನರರ ತುತಿಸಿ ನಾಲಿಗೆ ಬರಡಾಯಿತಲ್ಲ ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ ನರಗೆ ಪಾಮರಗೆ ಪಾಪದ ಪಂಜರಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು