ನಾ ಮಾಡಿದ ಕರ್ಮ

ನಾ ಮಾಡಿದ ಕರ್ಮ

(ರಾಗ ಸಾವೇರಿ. ತ್ರಿಪುಟ ತಾಳ ) ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೊ ದೇವ ||ಪ|| ಸಾಮಾನ್ಯವಲ್ಲವಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಫಣೆಯಲ್ಲಿ ಬರೆದುದಕೆ ||ಅ.ಪ|| ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ, ಪರ- ಸತಿಯರ ಸಂಗಗಳ ಬಿಟ್ಟವನಲ್ಲ ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ ಗತಿಯಾವುದಿನ್ನು ಗರುಡ ಗಮನ ಕೃಷ್ಣ || ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ ಸ್ನಾನ ಜಪ ಸಂಧ್ಯಾನ ತಪವ ನೀಗಿ ದಾನವಾಂತಕ ನಿನ್ನ ಧ್ಯಾನವ ಮಾಡದೆ ಶ್ವಾನದಂತೆ ಮನೆ ಮನೆ ತಿರುಗತಲಿದ್ದೆ || ಇನ್ನಾದರು ನಿನ್ನ ದಾಸರ ಸಂಗವಿತ್ತು ಮನ್ನಿಸಿ ಸಲಹಯ್ಯ ಮನ್ಮಥ ಜನಕ ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ ಪನ್ನಗ ಶಯನ ಶ್ರೀ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು