ಮೂರುತಿಯನೆ ನಿಲ್ಲಿಸೋ

ಮೂರುತಿಯನೆ ನಿಲ್ಲಿಸೋ

(ರಾಗ ಕಮಾಚ್. ರೂಪಕ ತಾಳ ) ಮೂರುತಿಯೆನೆ ನಿಲ್ಲಿಸೋ , ಮಾಧವ ನಿನ್ನ ಮೂರುತಿಯೆನೆ ನಿಲ್ಲಿಸೋ ||ಪ|| ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ || ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀ ಲಕುಮಿಯು ಉರದೊಳೊಪ್ಪುವ ನಿನ್ನ|| ಭಕ್ತರ ಕಾಮಧೇನು ಭಾಗ್ಯದ ಸುರಧೇನು ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ||
ದಾಸ ಸಾಹಿತ್ಯ ಪ್ರಕಾರ
ಬರೆದವರು