ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ

ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ

( ರಾಗ ಧನಶ್ರೀ ಏಕತಾಳ) ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ ರಕ್ಕಸಾಂತಕನ ಭಜಿಸಿ ಬರಿದಾಯ್ತೆನ್ನ ಬದುಕು |||ಪ|| ಅಡ್ಡ ಗಂಧವನಿಟ್ಟುಕೊಂಡು ರುದ್ರ ದೇವರ ಭಜಿಸುವಾಗ ಬಡ್ಡಿಗೆ ಹಣವ ಕೊಟ್ಟು ಸುಖದೊಳಿದ್ದೆವು ಅಡ್ಡ ಗಂಧ ಬಿಟ್ಟು ದೊಡ್ಡ ನಾಮ ಮುದ್ರೆ ಧರಿಸಲಾಗಿ ಬಡ್ಡಿ ಬಾಚಿ ಹೋಗಿ ಬಾಯ್ಗೆ ಗಡ್ಡೆ ಬಿದ್ದಿತು ಹೆಡಿಗೆ ತುಂಬ ದೇವರು ನಮ್ಮ ಮನೆಯೊಳಗಿರುವಾಗ ಒಡವೆ ವಸ್ತು ಇಟ್ಟುಕೊಂಡು ಸುಖದೊಳಿದ್ದೆವು ಒಡೆಯ ಹರಿಯೊಬ್ಬ ಸರ್ವರೊಡೆಯನೆಂದು ಭಜಿಸಲಾಗಿ ಒಡವೆ ಹೋಗಿ ಬಡತನ ಗಡನೆ ಬಂದಿತು ಮಿತ್ರೆ ಕೇಳೆ ನಮ್ಮ ಮನೆ ಮದುವೆಮುಂಜಿ ಕಾಲದಲ್ಲಿ ಅರ್ತಿಯಿಂದ ಒಮ್ಮೆ ಕಚ್ಚೆ ಕಟ್ಟುತಿದ್ದೆವು ನಿತ್ಯ ಕಚ್ಚೆಯೆನ್ನು ಹಾಕಿ ಸೀರೆಯೆನ್ನು ಉಡಲಾಗಿ ವ್ಯರ್ಥವಾಗಿ ಬಾಳುವೆ ಬದುಕು ಹಾಳಾಗ್ಹೋಯಿತು ಕಾರ ಹುಣ್ಣಿಮೆ ಕಾಲದಲ್ಲಿ ಮೂಲಂಗಿಗೆ ಬೆಳ್ಳುಳ್ಳಿಕ್ಕಿ ತೋರಿದರೆ ನಮ್ಮ ದೇವರು ವರವ ಕೊಡುತಿದ್ದ ಈ ವೀರವೈಷ್ಣವಗೆ ಕೊಟ್ಟು ತ್ರಾಹಿ ಎನಲಾಗಿ ಸೇರಿದಾ ಬದುಕು ಎಲ್ಲ ಹಾರಿ ಹೋಯಿತು ಎಲ್ಲಮ್ಮ ಯಕಲಾತಿ ಉಡ್ಡಿ ಮೈಲಾರ ದೇವರ ಕಲ್ಲೆಂದು ಭಜಿಪಾಗ ಕ್ಷೇಮವಿತ್ತೆ ಬಲ್ಲಿದ ಪುರಂದರ ವಿಠಲನ ಭಜಿಸಲು ಸಲ್ಲದ ವೈಕುಂಠ ಸಲ್ಲುವಂತಾದೀತು
ದಾಸ ಸಾಹಿತ್ಯ ಪ್ರಕಾರ
ಬರೆದವರು