ಮತದೊಳಗೆ ಒಳ್ಳೆ ಮತ ಮಧ್ವಮತವು,

ಮತದೊಳಗೆ ಒಳ್ಳೆ ಮತ ಮಧ್ವಮತವು,

(ರಾಗ ರೇಗುಪ್ತಿ ಝಂಪೆ ತಾಳ ) ಮತದೊಳಗೆ ಒಳ್ಳೆ ಮತ ಮಧ್ವಮತವು, ರಘು- ಪತಿ ಪೂಜಾ ವಿಧಾನಕ್ಕೆ ಪಾವನ ಮತವು ಇದು ಪಾವನ ಮತವು ||ಪ || ನಾರಾಯಣನ ನಾಮಸ್ಮರಣೆ ನಂಬಿದಾ ಮತವು , ಇದು ನಂಬಿದಾ ಮತವು ಪಾರಾಯಣಕೆ ಅನುಕೂಲ ಮತವು ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದ ಧಾರಿಣಿಯ ಸುರರ ಸಂತೋಷದ ಮತವು || ಅಕಳಂಕ ಶ್ರೀಹರಿಗೆ ವಜ್ರಾಂಕಿತ ಮತವು, ಇದು ಮುದ್ರಾಂಕಿತ ಮತವು ಸಕಲ ದೇಶಕ್ಕೆ ಸನ್ಮತವಾದ ಮತವು ಅಕುಟಿಲ ಶುಕಸನಕಾದಿ ಮುನೀಂದ್ರರ ನಿಖಿಳ ಕ್ರಿಯಪದವೀವ ನಿರ್ಮಲ ಮತವು || ಸರಸ ಸದ್ಗುಣ ಸತ್ಯ ಸಾತ್ವಿಕವೀ ಮತವು, ಇದು ಶುದ್ಧ ಸಾತ್ವಿಕ ಮತವು ಗುರು ಶಿಷ್ಯರಿಗೆ ಅನುಕೂಲವಾದ ಮತವು ಪರಮತ ಖಂಡಿಸಿ ಪಂಡಿತರು ಪೇಳಿದ ಪುರಂದರವಿಠಲನ ಮತವೆ ಹನುಮನ ಮತವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು