ಸ್ಮರಿಸು ಸಂತತ ಹರಿಯನು
--ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ
ಸ್ಮರಿಸು ಸಂತತ ಹರಿಯನು ಮನವೆ ||ಪ||
ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ
ಸರಸಿಯೊಳಗಂದು ಕರಿಯ ನರನ ಸಂ-
ಗರದೊಳಗೆ ಕಾಯ್ದುದರಿಯ
ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ
ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ||
ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು
ಸಾನುರಾಗದಿ ನಂಬಿದ ಜನಕೆ ಸುರ-
ಧೇನುವಂದದಲಿ ಮೋದಸಲಿಸುವ ಮ-
ಹಾನಂದ ಪೂರ್ಣಬೋಧ ಪ್ರತಿಸಾಮ-
ಗಾನಲೋಲ ಪ್ರಸಾದ-ಪಾದ ||೧||
ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು
ಬಲ್ಲಿದನು ಭಾಗ್ಯವಂತ ನಂಬಿದರಿ-
ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ-
ರೊಲ್ಲ ನಿಶ್ಚಯ ಮಹಂತರೊಡೆಯ ಕೈ-
ವಲ್ಯದಾಯಕನ ಇಂಥ-ಪಂಥ ||೨||
ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು
ನೀಡಿ ನೀಡಿಸುವ ಪಿಡಿವ ಪಿಡಿಸುವನು
ಬೇಡಿ ಭೇಡಿಸುವ ಬಡವರೊಡೆಯ ಕೊಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಸ್ಮರಿಸು ಸಂತತ ಹರಿಯನು
- Log in to post comments