ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
-----ರಾಗ ನವರೋಜು (ಬಿಲಾವಲ್) ಆದಿತಾಳ(ಕಹರವಾ)
ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ || ಪ ||
ಘೋರ ಭವ ವನಧಿ ತಾರಿಸು ಕರುಣದಿ
ಸೂರಿ ಸುಧೀ೦ದ್ರ ಕುಮಾರ ಉದಾರ || ಅ.ಪ ||
ಮುನಿರಾಯ ನಿಮ್ಮ ಪಾದವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನ ದಣಿದಣಿಸುವುದು
ಘನವೇ ಗುರುಪಾವನತರಚರಿತ || ೧ ||
ಮೂಲರಾಮನ ಪಾದಕೀಲಾಲಜ ಮಧುಪ
ಬಾಲನ ಬಿನ್ನಪ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಪತಿ ಕೋಲನ೦ದಿನಿ
ಕೂಲಗ ವರಮ೦ತ್ರಾಲಯನಿಲಯ || ೨ ||
ಕಲ್ಮಷದೂರ ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ-
ಗಳಶೋಭಿತ ಕಮ೦ಡಲ-ದ೦ಡಧರ
ಅಲವಬೋಧರ ಮತ ಜಲಧಿ ವಿಹಾರ
ಸುಲಲಿತ ಕರುಣಾಬ್ಧಿ ಜಗನ್ನಾಥವಿಠ್ಠಲನ
ಒಲುಮೆಯ ಪಡೆದೀ ಇಳೆಯೊಳು ಮೆರೆದೆ || ೩ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments