ಇದು ನಿನಗೆ ಧರ್ಮವೆ ಇಂದಿರೇಶ
----ರಾಗ ಕಾಂಬೋಧಿ (ಸಾರಂಗ) ಝಂಪೆತಾಳ
ಇದು ನಿನಗೆ ಧರ್ಮವೆ ಇಂದಿರೇಶ ||ಪ||
ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ||
ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ
ನಿನ್ನವರ ಪ್ರೀತಿಯನು ಸಂಪಾದಿಸಿ
ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ
ಮಾನವನ ಈ ಪರಿಯ ಬನ್ನಬಡಿಸುವದು ||೧||
ದುರುಳನಲ್ಲವೊ ನಿನ್ನ ಚರಣ ಸೇವಕರವನೊ
ಪರಿಪಾಲಿಪುದು ನಿನಗೆ ಪರಮಧರ್ಮ
ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ
ಶರಣಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨||
ಶೋಕನಾಶಕ ವಿಗತಶೋಕನೆಂಬೋ ನಾಮ
ನಾ ಕೇಳಿ ಮೊರೆಹೊಕ್ಕೆ ಲೋಕಬಂಧು
ನಿರಾಕರಿಸದೆಮ್ಮನು ಸಾಕಬೇಕನುದಿನವು
ವಾಕು ಮನ್ನಿಪುದು ಲೋಕೈಕ ರಕ್ಷಾಮಣಿ||೩||
ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು
ಪ್ರಣತಾರ್ತಿಹರ ವಿಭೀಷಣ ಪಾಲಕ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Read more about ಇದು ನಿನಗೆ ಧರ್ಮವೆ ಇಂದಿರೇಶ
- Log in to post comments