ಆ ವೆಂಕಟಗಿರಿನಿಲಯನಂಘ್ರಿ

--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ) ಆ ವೆಂಕಟಗಿರಿನಿಲಯನಂಘ್ರಿ ರಾ- ಜೀವಯುಗ್ಮಗಳಿಗೆ ನಮಿಸುವೆನು ||ಪ|| ಸೇವಿಪ ಜನರಿಗಮರತರುವೆನಿಸಿ ಧ- ರಾವಲಯಾಖ್ಯ ದಿವಿಯೊಳೆಸೆವ ||ಅ.ಪ|| ಆವನಂಘ್ರಿಜಲ ಸಕಲ ಜಗತ್ತಿಗೆ ಪಾವನಕರವೆಂದೆನಿಸುವದು ಶ್ರೀವಿಧಿಭವ ಶಕ್ರಾದ್ಯರು ಅವನ ಸೇವಕಸೇವಕರೆನಿಸುವರು ||೧|| ದೇವೋತ್ತಮ ತಾನಾಗಿ ನಿಖಿಲ ಜಡ ಜೀವ ಭಿನ್ನ ಕರ್ಮವ ಮಾಳ್ಪ ಸ್ಥಾವರ ಜಂಗಮರೊಳಗೆ ನೆಲೆಸಿ ವೇ- ದಾವಳಿಯಿಂದ ಸ್ತುತಿಸಿಕೊಂಬ ||೨|| ಮಾತರಿಶ್ವನೊಡನಹಿಪನೊರೆದ ಸ- ತ್ವಾತಿಶಯವ ತೋರೆನುತಾಗ ಜಾತರೂಪ ಶೈಲಾತ್ಮಜನೊಪ್ಪಿರೆ ವೀತಿಹೋತ್ರ ಸಖ ಕಿತ್ತೊಗೆಯ ||೩|| ಪೀತಕರ್ಣನಳವಳಿದು ಸ್ತುತಿಸೆ ನಿ- ಕೇತನತ್ರಯವ ನಿಳಿದು ಬೇಗ ಧಾತ ಮಹಿಳೆ ತೀರ್ಥದಿ ಲಕುಮಿಸ- ಮೇತನಾಗಿ ಮೋದಿಸುತಿಪ್ಪ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರ್ವಾಂತರ್ಯಾಮಿ ಸಲಹೊ

--ರಾಗ ಕಾಂಬೋಧಿ (ಭೂಪ) ತಾಳ-ಝಂಪೆ ಸರ್ವಾಂತರ್ಯಾಮಿ ಸಲಹೊ ಎನ್ನ ||ಪ|| ದುರ್ವಾರ್ತೆ ಕೇಳಿ ಮನ ಬಿಡದೆ ಚಿಂತಿಸುತಿದೆ||ಅ.ಪ|| ಜೀವರಿಗೆ ಗುಣಕಾಲಕರ್ಮಪ್ರಕೃತಿಗಳ ಸ್ವ- ಭಾವಗಳನನುಸರಿಸಿ ಸುಖ-ದುಃಖವ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ- ತ್ತಾವನೈ ಭಕ್ತರನು ಪಾಲಿಸುವ ದಾತ ||೧|| ಸತ್ಯಸಂಕಲ್ಪ ನೀನೆಂಬುದೆಂದಿಗು ಸತ್ಯ ಭೃತ್ಯವತ್ಸಲನೆಂಬೊ ಬಿರುದಿಲ್ಲವೆ ದತ್ತಾತ್ರೇಯ ನಿನ್ನ ಸ್ಮರಣೆ ಮಾತ್ರದಿ ಅಪ- ಮೃತ್ಯು ಪರಿಹರವಹುದು ಸಂದೇಹವಿಲ್ಲಿದಕೆ ||೨|| ಶ್ರೀಪತೇ ಎನ್ನ ವಿಜ್ಞಾಪನೆಯ ಕೈಕೊಂಡು ಪಾಪಿ ಜನರಿಂದ ಬಂದಾಪತ್ತನು ನೀ ಪರಿಹರಿಸಯ್ಯ ದ್ರೌಪದೀವರದ ಕರು- ಣಾಪಯೋನಿಧಿ ಜಗನ್ನಾಥವಿಠ್ಠಲಸ್ವಾಮಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸೊ ಶ್ರೀಶ ಶ್ರೀನಿವಾಸ

( ರಾಗ- ಮಧ್ಯಮಾವತಿ(ಸಾರಂಗ) ಅಟತಾಳ(ದೀಪಚಂದಿ) ) ರಕ್ಷಿಸೊ ಶ್ರೀಶ ಶ್ರೀನಿವಾಸ ||ಪ|| ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗಾ- ಧ್ಯಕ್ಷ ಖಳಜನಶಿಕ್ಷ ಪಾಂಡವ- ಪಕ್ಷ ಕರುಣಕಟಾಕ್ಷದಲಿ ನೀ- ನಿಕ್ಷಿಸುತ ಪೊರೆ ಪಕ್ಷಿವಾಹನ||ಅ.ಪ|| ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರ ಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಪಂಚು ನೋಟದ ಮಿಂಚಿಗೆನ್ನ ಮನ ಚಂಚಲವು ಪುಟ್ಟಿ ವಂಚಿಸೇ ಯಮನಂಚಿಗೆ ತಲುಪಿದೆ ||೧|| ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ಕೂಪದಿ ಬಿದ್ದು ಧಿಟ್ಟ ನಿನ್ನಯ ಗುಟ್ಟು ತಿಳಿಯದೆ ಹೊಟ್ಟೆಗೋಸುಗ ಕೆಟ್ಟೆ, ಕುಜನರ ಥಟ್ಟನೆ ಕಾಲಗಟ್ಟಿ ಬಹು ಶ್ರಮ- ಪಟ್ಟು ನಾ ಕಂಗೆಟ್ಟೆ ಪ್ರತಿದಿನ || ೨|| ಶ್ರೀ ಕಮಲೇಶ ಹೃತ್ಪದ್ಮದಿ- ನೇಶಪ್ರಕಾಶ ಬೇಗನೆ ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ತುಂಗ ಭುಜಂಗನ ಫಣೆಯಲಿ ಕುಣಿದನು

ತುಂಗ ಭುಜಂಗನ ಫಣೆಯಲಿ ಕುಣಿದನು ಮಂಗಳ ಮೂರುತಿ ರಂಗಾ|| ಗಿಣಿಗಿಣಿ ತಾಳ ಝೇಂಕರಿಸುವ ತಂಬೂರಿ ಗಣಗಣವೆಂಬೊ ಸುನಾದ ಮೃದಂಗವ ಝಣಿಝಣಿಸುವ ಗಂಜರಿ ನಾದಗಳನು ಅನುಕರಿಸುತ ದಿಕ್ಕಿಟದಿಕ್ಕಿಟ ಎಂದು|| ಗಗನವ ತುಂಬಿ ತುಂಬುರು ಗಂಧರ್ವರು ಶಹನ ಅಟಾಣ ಶಂಕರಾಭರಣಗಳಿಂದ ಸೊಗಸಿನಿಂದಲಿ ಗುಣಗಾನವ ಮಾಡಲು ನಗಧರ ಕೃಷ್ಣನು ನಗುಮೊಗದಿಂದಲಿ|| ಪನ್ನಗ ಸತಿಯರು ಚೆನ್ನಾದ ತವಕದಿ ಸನ್ನುತಿಸುತ ಆರತಿಯ ಬೆಳಗುತಿರೆ ಉನ್ನತ ಗಗನದಿ ಸುಮನಸರೆಲ್ಲ ಪ್ರಸನ್ನ ಹರಿಗೆ ಸುಮ ಮಳೆಗರೆಯುತಲಿರೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧುರವು ಮಧುರನಾಥನ ನಾಮವು

ಮಧುರವು ಮಧುರನಾಥನ ನಾಮವು ದಧಿ ಮಧು ದ್ರಾಕ್ಷಾಸುಧೆರಸಗಳಿಗಿಂತ|| ಸುಂದರವದನನ ಅರವಿಂದ ನಯನನ ನಂದಕುಮಾರನ ಚೆಂದದ ನಾಮವು|| ಯದುಕುಲತಿಲಕನ ಸದಮಲ ಚರಿತನ ಮದನಪಿತನ ನಾಮ ಮುದದಲಿ ಪಾಡಲು|| ಗಾನವಿಲೋಲನ ದಾನವಕಾಲನ ಲೀಲೆಗಳನು ಸದಾ ಲಾಲಿಸಿ ಪೊಗಳಲು|| ಹೇಮವಸನನ ಕೋಮಲರೂಪನ ಭಾಮಕಾಂತನ ಪ್ರೇಮದ ನಾಮವು|| ಪನ್ನಗಶಯನನ ಚಿನ್ಮಯರೂಪನ ಸನ್ನುತಿಸಲಿಕೆ ಪ್ರಸನ್ನನ ನಾಮವು||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪಮೃತ್ಯು ಪರಿಹರಿಸೊ ಅನಿಲ ದೇವ

( ರಾಗ ಕಾಂಬೋಧಿ(ಭೂಪ) ಝಂಪೆತಾಳ) ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ ದೊರೆ ನಿನ್ನೊಳಗಿಪ್ಪ ಪರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨| ಭವರೋಗಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩|| ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ- ಚಾನನಾದ್ಯಮರರಿಗೆ ಪ್ರಾಣದೇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಲ್ಲುಬಾರೊ ದಯಾನಿಧೆ

( ರಾಗ-ಆನಂದಭೈರವಿ(ಕಿರ್ವಾಣಿ) ಅಟತಾಳ(ದೀಪಚಂದಿ) ) ನಿಲ್ಲುಬಾರೊ ದಯಾನಿಧೆ ||ಪ|| ನಿಲ್ಲುಬಾರೊ ಸರಿಯಿಲ್ಲ ನಿನಗೆ ಲಕ್ಷ್ಮೀ- ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ||೧|| ಅತಿಮೃದುವಾದ ಹೃತ್ಶತಪತ್ರ ಸದನದಿ ಶಾಶ್ವತ ಭವ್ಯ ಮೂರುತಿ ಭಕ್ತವತ್ಸಲ ||೨|| ನಾನಾ ವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ ||೩|| ತನು ಮನ ಧನ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ ||೪|| ಯಾತರ್ಯೋಚನೆ ಮನಸೋತ ಬಳಿಕ ಪುರು- ಹೂತವಂದಿತ ಜಗನ್ನಾಥವಿಠ್ಠ್ಲರೇಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸೋಹಂ ತವ ದಾಸೋಹಂ

( ರಾಗ- ಪೀಲೂ (ಭೈರವ) ಆದಿತಾಳ) ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪ|| ವಾಸುದೇವ ವಿಗತಾಘಸಂಘ ತವ ||ಅ. ಪ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮ ಫಲಪ್ರದ ಕರ್ಮಜಿತ ಕರ್ಮಬಂಧ ಮಹ ಕರ್ಮವಿಮೋಚಕ ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩|| ಧರ್ಮಯೂಪ ಮಹ ಧರ್ಮವಿವರ್ಧನ ಧರ್ಮವಿದೊತ್ತಮ ಧರ್ಮನಿಧೇ ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪|| ಮಂತ್ರಯಂತ್ರ ಮಹ ಮಂತ್ರ ಬೀಜ ಮಹ ಮಂತ್ರ ರಾಜಗುರು ಮಂತ್ರಧೃತ ಮಂತ್ರಮೇಯ ಮಹ ಮಂತ್ರನಿಯಾಮಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಕವಿದು ಹರಿಕಥಾಮೃತ

( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) ) ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ|| ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು ನೊಂದು ವೈನತೇಯವಾಹನ ಸನ್ನಿಧಾನ ಬೇಕು ಎಂಬವಗೆ ||೧|| ಪ್ರಿಯವಸ್ತುಗಳೊಳು ಪಾಂಡವರ ಸಖನೆ ಎಮಗೆ ಬ್ರಹ್ಮ ವಾಯು ಉಚ್ಚಸುರರು ತಂದೆತಾಯಿ ಎಂದರಿತವರಿಗೆ ||೨|| ಶ್ರೀ ಮುಕುಂದ ಸರ್ವ ಮಮ ಸ್ವಾಮಿ ಅಂತ- ರಾತ್ಮ ಪರಂಧಾಮ ದೀನಬಂಧು ಪುಣ್ಯನಾಮವೆಂದರಿತವರಿಗೆ ||೩|| ಜ್ಞೇಯಜ್ಞಾನಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕಯ ಮನದಿ ಮಾಡ್ದ ಕರ್ಮ ಶ್ರೀಯರಸನಿಗೀವ ನರಗೆ ||೪|| ಭೂತ ಭವ್ಯ ಭವತ್ಪ್ರಭು ಅನಾಥಜನರ ಬಂಧು ಜಗ- ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ

ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ |ಪ| ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲಧ್ವನಿಗೆ ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣೆಗಾರನೆ|| ಆರು ಬಲ್ಲರು ನಿಮ್ಮ ಶ್ರೀ ಲಕುಮಿಯ ಮನಸಿಗೆ ತೋರುವಿಯೊ ಪರಬೊಮ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮ ಇದು ನಿನ್ನ ಮರ್ಮ ನೀರೊಳಗೆ ಮನೆ ಭಾರ ಬೆನ್ನಿಲಿ ಕೋರದಾಡೆಯ ನಾರಸಿಂಹನೆ ಧರೆಯ ಬೇಡಿದ ಧೀರಪುರುಷನೆ ವಾರಿಬಂಧನ ಮಾರಜನಕನೆ ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ|| ಸಕಲಮಾಯವಿದೇನು ವೃಕನ ವಾಯು ಸಖನ ಸಲಹಿದೆ ನೀನು ಭಕುತಿಯಿಂದಲಿ ತುತಿಪರಿಗೆ ಸುರಧೇನು ಸುರಕಾಮಧೇನು ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ನೆಲನಳೆದ ಭಾರ್ಗವ ಮುಕುತಿಗೋಸುಗ ಫಲವ ಸವಿದನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು