ಸುಣ್ಣವಿಲ್ಲ ಭಾಗವತರೆ

( ರಾಗ ಪೂರ್ವಿ ಅಟ ತಾಳ) ಸುಣ್ಣವಿಲ್ಲ ಭಾಗವತರೆ ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ ||ಪ || ವೀಳ್ಯ ಹಾಕುವನಲ್ಲ ವ್ಯಾಧಿಸ್ಥ ಗಂಡನು ಬಾಳು ಸಟೆ ಎನ್ನ ಬಾಯಿ ನೋಡಿ ಹಾಳು ಮನೆಯ ಹೊಕ್ಕು ಒಡಲು ಉರಿಯುತಿದೆ ಹೇಳಿ ಈ ಬದುಕನ್ನು ಪ್ರಯೋಜನವೇನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನಿರು ಮನವೆ

( ರಾಗ ಕಾಮವರ್ಧನಿ /ಪಂತುವರಾಳಿ ಛಾಪು ತಾಳ) ಸುಮ್ಮನಿರು ಮನವೆ, ನಿನ್ನೊಳು ನೀನು ಸುಮ್ಮನಿರು ಮನವೆ || ಯಾರಾದರು ಆಡಲಿ ಅವರರ್ತಿಯ ದೂರದಲಿ ನಿಂತು ನೋಡದಿರು ಮೀರಿ ಅವರನ್ನು ನೀ ಅಹುದಲ್ಲವೆಂದರೆ ಗಾರು ಮಾಡಿ ನಿನ್ನ ದೂರಿಗೆಳೆವೋರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೆ ಕಾಲವ ಕಳೆವರೆ

( ರಾಗ ಕಾಮವರ್ಧನಿ/ಪಂತುವರಾಳಿ ಅಟ ತಾಳ) ಸುಮ್ಮನೆ ಕಾಲವ ಕಳೆವರೆ, ಯಮ- ಧರ್ಮರಾಯನ ದೂತರೆಳೆಯರೆ ||ಪ|| ನರಿನಾಯಿ ಜನ್ಮದಿ ಬಾರದೆ, ಈ ನರಜನ್ಮದಲಿ ಬಂದು ಸೇರಿದೆ ಹರಿಯ ಸ್ಮರಣೆಯನು ಮಾಡದೆ, ಸುಮ್ಮ- ನಿರಲು ಪಾಪದ ವಿಷವೇರದೆ || ಬಾಲಕನಾಗಿದ್ದಾಗ ಬಹು ಲೀಲೆ, ಸ್ತ್ರೀ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು

( ರಾಗ ಆನಂದಭೈರವಿ ತ್ರಿಪುಟ ತಾಳ) ಸುಮ್ಮನೆ ದೊರಕುವದೇ ಶ್ರೀರಾಮನ ದಿವ್ಯನಾಮವು ||ಪ || ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||ಅ || ಭಕ್ತಿರಸದಲಿ ತನ್ನ ಚಿತ್ತ ಪರವಶವಾಗಿ ಅಚ್ಯುತನ ನಾಮವ ಬಚ್ಚಿಟ್ಟುಕೊಂಡವಗಲ್ಲದೆ || ಕಂತುಪಿತನ ದಿವ್ಯನಾಮ ಅಂತರಂಗದೊಳಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಂಜ್ಞೆಯಿಂದಾಳಬೇಕಣ್ಣ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ಸಂಜ್ಞೆಯಿಂದಾಳಬೇಕಣ್ಣ , ಗಂಡ- ನಾಜ್ಞೆಯ ಮೀರಿ ನಡೆವ ಲಂಡ ಹೆಣ್ಣ ||ಪ|| ಅತ್ತೆ ಮಾವಗೆ ಅಂಜದವಳ, ತನ್ನ ಉತ್ತಮಪುರುಷನ ಜರೆದು ನುಡಿವಳ ಭಕ್ತರ ಕಂಡು ಬಂಧಿಪಳ, ನಡು- ನೆತ್ತಿಯ ಚರ್ಮವ ಕೆತ್ತಬೇಕವಳ || ಕೂಳು ಕೊಬ್ಬಿಲಿ ಉರಿವವಳ, ಗಂಡ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬಿದೆ ನಿನ್ನ ಪಾದವ

(ರಾಗ ನವರೋಜ್ ಆದಿ ತಾಳ ) ನಂಬಿದೆ ನಿನ್ನ ಪಾದವ, ವೆಂಕಟರಮಣ ನಂಬಿದೆ ನಿನ್ನ ಪಾದವ ||ಪ|| ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ ||ಅ|| ತಂದೆಯಾಗಿ ನೀನೇ ತಾಯಿಯು ನೀನೇ ಬಂಧುಬಳಗವು ನೀನೆ ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬಿ ಕೆಟ್ಟವರಿಲ್ಲವೋ

(ರಾಗ ಕಲ್ಯಾಣಿ ಅಟತಾಳ ) ನಂಬಿ ಕೆಟ್ಟವರಿಲ್ಲವೋ, ರಂಗಯ್ಯನ, ನಂಬದೇ ಕೆಟ್ಟರೆ ಕೆಡಲಿ ||ಪ|| ಅಂಬುಜನಾಭನ ಪಾದವ ನೆನೆಯೆ ಭ- ವಾಂಬುಧಿ ದುಃಖವ ಪರಿಹರಿಸುವ ಕೃಷ್ಣ |ಅ|| ಬಲಿಯ ಪಾತಾಳಕ್ಕೆ ಇಳಿಸಿ ಭಕ್ತ- ಗೊಲಿದು ಬಾಗಿಲ ಕಾಯ್ದನು ಛಲದೊಳು ಅಸುರನ ಶಿರಗಳ ತರಿದು ತ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ತೇಲಿಸೊ ಇಲ್ಲ ಮುಳುಗಿಸೊ

( ರಾಗ ಪೂರ್ವಿಕಲ್ಯಾಣಿ ಅಟ ತಾಳ) ತೇಲಿಸೊ ಇಲ್ಲ ಮುಳುಗಿಸೊ, ನಿನ್ನ ಕಾಲಿಗೆ ಬಿದ್ದೆನೊ ಪರಮಕೃಪಾಳೋ ||ಪ|| ಸತಿ ಸುತ ಧನದಾಸೆ ಎಂತೆಂಬ ಮೋಹದಿ ಹಿತದಿಂದ ಅತಿ ನೊಂದು ಬೆಂಡಾದೆನೊ ಗತಿ ಕೊಡುವರ ಕಾಣೆ ಮತಿಯ ಪಾಲಿಸೊ ಲಕ್ಷ್ಮೀ- ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೋಡುವುದೇ ಕಣ್ಣು

(ರಾಗ ಧನಶ್ರೀ ಅಟ ತಾಳ ) ನೋಡುವುದೇ ಕಣ್ಣು ಕೇಳುವುದೇ ಕಿವಿ ಪಾಡುವುದೇ ವದನ ||ಪ|| ಗಾಡಿಗಾರ ಶ್ರೀ ವೇಣುಗೋಪಾಲನ ಕೂಡಿ ಕೊಂಡಾಡುವ ಸುಖವ ಸೊಬಗನು ||ಅ|| ಪೊಂಗೊಳಲೂದುತ ಮೃಗ ಪಕ್ಷಿಗಳನೆಲ್ಲ ಸಂಗಳಿಸುತಲಿಪ್ಪನ ಅಂಗಜಜನಕ ಗೋಪಾಂಗನೇರೊಡನೆ ಬೆಳ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ

( ರಾಗ ಕಾಂಭೋಜಿ ಝಂಪೆ ತಾಳ) ತಂಗಿಗ್ಹೇಳಿದ ಕೃಷ್ಣ ಚಂದದಲಿ ಬುದ್ಧಿ ||ಪ|| ಅತ್ತೆಯ ಮನೆಯಲ್ಲಿ ಇರುವಂಥ ಸುದ್ದಿ ||ಅ|| ಯಾರೇನು ಅಂದರು ಮೋರೆಯನು ತಿರುವದಿರು ಮೋರೆ ಮೇಲೆ ಕೈಯೆತ್ತಿ ಬಲ್ಲಳೆಂದೆಣಿಸಿ ವಾರಿಗೇವರ ಕೂಡಿ ನೀರನ್ನು ತರುವಾಗ
ದಾಸ ಸಾಹಿತ್ಯ ಪ್ರಕಾರ
ಬರೆದವರು