ನಾ ನಿನ್ನ ಧ್ಯಾನದೊಳಿರಲು

(ರಾಗ ಕಾನಡ ರೂಪಕ ತಾಳ ) ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನು ಮಾಡಬಲ್ಲರೊ ರಂಗ ||ಪ|| ಮಚ್ಚರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಕೇಳಲೊ ರಂಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ಗೋವಿಂದ ಜಯಜಯ

(ರಾಗ ಪೀಲು ಆದಿತಾಳ ) ನಾರಾಯಣ ಗೋವಿಂದ ಜಯಜಯ ಪರತರ ಪರಮಾನಂದ ||ಪ|| ನಕ್ತಂಚರಹರ ನವ್ಯಗುಣಾಕರ ನಾರದಗಾನವಿಲೋಲ || ತ್ರಿಪುರಸಂಹಾರಕ ವಿಪರೀತರೂಪ ವಿಪುಲಕಲ್ಕ್ಯವತಾರ || ದಾಸದಾಸ ಸಿರಿಪುರಂದರವಿಠಲ ಶೇಷಶಯನ ಸರ್ವೇಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಬ್ಬ ಸತಿ ಪತಿಗಾಗಿ

ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ ಅಬ್ಜ ಬಾಂಧವನ ನಿಲಿಸಿದಳು ನೋಡಾ ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ ನಿಬ್ಬರದಿ ಪ್ರಾಣವ ಪಡೆದಳು ನೋಡಾ ಒಬ್ಬ ಸತಿ ಪತಿಗಾಗಿ ಚಿತ್ರಗುಪ್ತರು ಆಡಿದ ಶಬ್ದ ಆಲಿಸಿ ಐದೆತನ ಪಡೆದಳು ಊರ್ವಿಯೊಳಗೀಪರಿ ಸತಿಯರ ಸ್ವಧರ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ ಕುಲುಕಿ ನಡಿಯುವವನ ಷಣ್ಮುಖನನೊಲ್ಲೆನವ್ವ ಹಲವು ಬಾಯವನ ಇಂದ್ರನನೊಲ್ಲೆನವ್ವ ಮೈಗಣ್ಣಿನವನ ಚಂದ್ರನನೊಲ್ಲೆನವ್ವ ಕ್ಷಯರೋಗದವನ ಸೂರ್ಯನನೊಲ್ಲೆನವ್ವ ಉರಿದು ಮೂಡುವವನ ಹರನ ನಾನೊಲ್ಲೆನವ್ವ ಹಣೆಗಣ್ಣಿನವನ ಜನಕೆಲ್ಲ ಚೆಲುವನ ಜಗಕೆಲ್ಲ ಒಡೆಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮೊಸರ ಸುರಿದು ಓಡುವ

(ರಾಗ ಆನಂದಭೈರವಿ ಆದಿ ತಾಳ ) ಮೊಸರ ಸುರಿದು ಓಡುವ, ಈ ಮಾಯದ ಶಿಶುವ ತೋರಿಸು ಎನಗೆ ಹುಸಿಯನಾಡುವುದೇಕೆ ರಂಗಗೆ ಮೊಸರೆಂಬ ಪೆಸರು ಪೇಳಿದರಾಗದು, ಅಮ್ಮಯ್ಯ || ಪ|| ಮಂದಿರವನ್ನು ದಾಟಿ ನಮ್ಮ ರಂಗ ಬಂದುದುಂಟೇನೆ ಎಂದು ಹಿಂದುಮುಂದರಿಯದೆ ದೂರಬಾರದು ನಮ್ಮ ಕಂದ ಗೋವಳರಾಯನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ

(ರಾಗ ಸೌರಾಷ್ಟ್ರ ಆದಿ ತಾಳ ) ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ || ಅಕ್ರೂರಗೊಲಿದ ತ್ರಿವಿಕ್ರಮಗೆ ನಕ್ರನ ಗೆಲಿದ ಪರಾಕ್ರಮಿಗೆ ಶಕ್ರನ ಗರ್ವಪಹಾರವ ಮಾಡಿದ ಶುಕ್ರನ ಶಿಷ್ಯನ ಗೆಲಿದವಗೆ || ಗಂಗೆಯ ಪಡೆದ ಶ್ರೀರಂಗನಿಗೆ ರಂಗುಮಾಣಿಕದುಂಗುರದವಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾ ಮಝ ಬಾಪುರೇ

(ರಾಗ ಮೋಹನ ಅಟತಾಳ ) ಮಾ ಮಝ ಬಾಪುರೇ ಭಳಿರೆ ಹನುಮಂತ ||ಪ || ರಾಮಪದ ಸೇವಿಪ ವೀರ ಹನುಮಂತ ||ಅ || ಹುಟ್ಟುದಲೆ ಹೊನ್ನ ಕಚ್ಚುಟವ ಕುಂಡಲವೆರಸಿ ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ದಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ ಪಟ್ಟಕನುವಾದ ಸಿರಿವಂತ ಹನುಮಂತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಾನಭಂಗವ ಮಾಡಿ ಮತ್ತೆ ಉಪಚಾರ

(ರಾಗ ಕಾಂಭೋಜ ಝಂಪೆ ತಾಳ ) ಮಾನಭಂಗವ ಮಾಡಿ ಮತ್ತೆ ಉಪಚಾರಗಳ- ನೇನ ಮಾಡಿದರಲ್ಲಿ ಇರಬಾರದಯ್ಯ ||ಪ|| ಕುಂದುಗಳನೆತ್ತಿ ಕುಚೋದ್ಯ ಕುಮಂತ್ರಗಳ- ನೊಂದೊಂದು ವರ್ಣಗಳನೆತ್ತಿ ಜರೆದು ಮುಂದೆ ಭಂಗಿಸಿ ಹಿಂದೆ ಉಂಬಳಿಯ ನೀಡುವುದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ

(ರಾಗ ಸೌರಾಷ್ಟ್ರ ಆದಿ ತಾಳ ) ಮಲಗಿ ಎದ್ದನು ಕಾಣೆ ಮಕ್ಕಳ ಮಾಣಿಕ ರಂಗ, ಎದ್ದ ಕಾಣೆ ಅಮ್ಮ ಛಲಹೋರಿ ಅಳುತಾನೆ ಮೊಲೆ ಕೊಡೆ ರಂಗಗೆ, ಎದ್ದ ಕಾಣೆ ||ಪ || ಧರೆಯೊಳು ತಮನ ಮರ್ದಿಸಲೆಂದು ಮತ್ಸ್ಯನಾ, ಗೆದ್ದ ಕಾಣೆ ಭರದಿ ಮಂದರ ಪೊತ್ತು ಇಳೆಯೊಳು ಕೂರ್ಮನಾ, ಗೆದ್ದ ಕಾಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಗನೆಂದಾಡಿಸುವಳು ಜಗದುದರನ್ನ

(ರಾಗ ಶಂಕರಾಭರಣ ಅಟತಾಳ ) ಮಗನೆಂದಾಡಿಸುವಳು ಜಗದುದರನ್ನ, ಆನಂದದಿ ಗೋಪಿ ||ಪ|| ಕುಕ್ಷಿಯೊಳೀರೇಳು ಜಗವೆಲ್ಲವ ತಾಳಿ ರಕ್ಷಿಸಿಕೊಂಡಿಹ ಬಲವಂತನ ಪಕ್ಷಿವಾಹನ ದೇವ ಅಂಜಿದಂಜಿದನೆಂದು ರಕ್ಷೆಯಿಡುವ ಪುಣ್ಯವೆಲ್ಲಿ ಪಡೆದಳೊ || ಸಾಗರಪತಿಯಾಗಿ ಭೋಗಿ ಶಯನದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು