ರಾಮರಾಮೆನ್ನಿರೋ

( ರಾಗ ಮಧ್ಯಮಾವತಿ ಅಟ ತಾಳ) ರಾಮ ರಾಮೆನ್ನಿರೋ, ಇಂಥಾ ಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀವವ ನಂಬಿ ನೆಚ್ಚಿ ನೀವು ಕೆಡಬೇಡಿರೊ || ನೆಲೆ ಇಲ್ಲದ ಕಾಯ ಎಲುವಿನ ಹಂದರ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ನಾಮ ಪಾಯಸಕ್ಕೆ

( ರಾಗ ಆನಂದಭೈರವಿ ರೂಪಕ ತಾಳ) (ರಾಗ ಪಂತುವರಾಳಿ ಏಕತಾಳ) ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಟ್ಠಲನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೊ ||ಪ|| ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಿಲಿ ಬೀಸಿ ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮ ಮಂತ್ರವ ಜಪಿಸೊ

( ರಾಗ ಮಧ್ಯಮಾವತಿ ಆದಿ ತಾಳ) ರಾಮ ಮಂತ್ರವ ಜಪಿಸೊ ಹೇ ಮನುಜಾ ||ಪ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ || ಅ || ಕುಲಹೀನನಾದರು ಕೂಗಿ ಜಪಿಸುವ ಮಂತ್ರ ಸಲೆ ಬೀದಿಯೊಳು ಉಚ್ಚರಿಪ ಮಂತ್ರ (/ಜಲಜಪಾಣಿ ನಿತ್ಯ ಜಪಿಪ ಮಂತ್ರ)
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ದಧಿಯ ಮಥಿಸುವಂತರಲ್ಲಿ

( ರಾಗ ಕಾಪಿ ಆದಿ ತಾಳ)

 

ರಂಗ ದಧಿಯ ಮಥಿಸುವಂತರಲ್ಲಿ , ಅವರು ಒ-

ದಗಿ ಹೇಳಲು ಬಂದರಿಂತಿಲ್ಲಿ ನಿನ್ನ ಸೊ-

ಬಗು ಗೋವಳರ ಕೂಡ ತಾ ಹೋದ್ಯಂತೆ

(ರಂಗ ಚತುರತನದಿ ಬೆಣ್ಣೆ ಮೆದ್ಯಂತೆ )

ನಾ ಸುಳಸಿ , ಇಂಥಾ ಮಗನು ಯಾಕಾದ್ಯೊ ||

 

ಅಮ್ಮ, ಕತ್ತಲೆ ಮನೆಯೊಳಗೆ ಬರಲು

ಅಲ್ಲಿ ಬೆಕ್ಕು ಮೊಸರು ಕುಡಿಯುತಿರಲು ನಾನು

ಹೊಕ್ಕು ಹೊಕ್ಕು ಹೊರಡಿಸಿ ಬಂದೆ ಮತ್ತೆ

ಬೆಣ್ಣೆ ಮೆಲ್ಲಲಿಲ್ಲ ಅಂಥಾ ಮಗನು ನಾನಲ್ಲ ||

 

ರಂಗ , ಅತ್ತೆ ಮನೆಯವರಂತಲಿ

ಅವರ ಹತ್ತಿಲಿ ಹೋಗಿ ನಿಂತಿದ್ದೆಂತೆ ನೀನು

ಅವರ ಚಿತ್ತವ ಪಲ್ಲಟ ಮಾಡಿ ಹೋದ್ಯಂತೆ

ನಾ ಸುಳಸಿ ಇಂಥಾ ಮಗನು ಯಾಕಾದ್ಯೋ ಕೃಷ್ಣಯ್ಯ ||

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ಗ್ರಹಬಲ ನೀನೇ ಸರಸಿಜಾಕ್ಷ

( ರಾಗ ಅಠಾಣಾ ಖಂಡ ಛಾಪು ತಾಳ)

(ರಾಗ ಕಾಂಭೋಜ , ಅಟತಾಳ)

 

ಸಕಲ ಗ್ರಹಬಲ ನೀನೇ ಸರಸಿಜಾಕ್ಷ

ನಿಖಿಳರಕ್ಷಕ ನೀನೇ ವಿಶ್ವವ್ಯಾಪಕನೇ ||

 

ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ

ಕವಿ ಗುರುವು ಶನಿಯು ಮಂಗಳನು ನೀನೇ

ದಿವ ರಾತ್ರಿಯು ನೀನೇ ನವ ವಿಧಾನವು ನೀನೇ

ಭವರೋಗ ಹರ ನೀನೇ ಭೇಷಜನು ನೀನೇ ||

 

ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ

ನಕ್ಷತ್ರ ಯೋಗ ತಿಥಿ ಕರಣಗಳು ನೀನೇ

ಅಕ್ಷಯವೆಂದು ದ್ರೌಪದಿಯ ಮಾನವ ಕಾಯ್ದ

ಪಕ್ಷಿವಾಹನ ದೀನರಕ್ಷಕನು ನೀನೆ ||

 

ಋತುವತ್ಸರವು ನೀನೆ ಮತ್ತೆ ಯುಗಾದಿಯು ನೀನೇ

ಕ್ರತುವು ಹೋಮ ಯಜ್ಞ ಸದ್ಗತಿಯು ನೀನೇ

ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಕಲ ದುರಿತಗಳ ಪರಿಹಾರ

( ರಾಗ ಸೌರಾಷ್ಟ್ರ ಅಟ ತಾಳ) ಸಕಲ ದುರಿತಗಳ ಪರಿಹಾರ ಮಾಡಿದ್ಯೊ ವೆಂಕಟೇಶ ||ಪ || ಭಕುತಿಗೊಲಿದು ಬಂದು ಭಕ್ತರ ಕಾಯ್ದೆಯೊ ವೆಂಕಟೇಶ ||ಅ|| ಮತ್ಸ್ಯಾವತಾರದಿ ನಾಲ್ಕು ವೇದವ ತಂದ್ಯೊ ವೆಂಕಟೇಶ ಪೃಥ್ವೀಧರವ ಪೊತ್ತು ಭ್ರುತ್ಯರ ನೀ ಕಾಯ್ದ್ಯೊ ವೆಂಕಟೇಶ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣ ನಾರಾಯಣ ನಾರಾಯಣ

ನಾರಾಯಣ ನಾರಾಯಣ ನಾರಾಯಣ ||ಪ|| ನಳಿನೋದರ ನಾರದಪ್ರಿಯ ನಾಮ ಜಯ ನಾರಾಯಣ ನರಕಾಂತಕ||ಅ.ಪ|| ಸುರಸಂಚಯ ಸುಖಕಾರಣ ದಿತಿಜಾಂತಕ ದೀನಶರಣ| ಪರತ ಪರ ಪಾಂಡವಪ್ರಿಯ ಪರಿಪೂರ್ಣ ಜಯ|| ಅಘಕುಲವನದಾವಾನಲ ಅಗಣಿತ ಗುಣಗಣ ನಿರ್ಮಲ| ತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ

( ರಾಗ ಬೇಗಡೆ ಛಾಪು ತಾಳ) ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ, ಏನೆಂದು ಪೇಳಮ್ಮ ||ಪ || ವಾಸುದೇವನು ಬಂದು ಮೋಸದಿಂದಲಿ ಎನ್ನ ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ || ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ ಸಾವಿರ ನುಂಗುವನೆ ಭಾವಜನಯ್ಯ ಇದೇನೆಂದರೆ ನಿಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಧು ಸಂಗವಾಗದ ಬಾಳು

( ರಾಗ ಯದುಕುಲಕಾಂಭೋಜ ಆದಿ ತಾಳ) ಸಾಧು ಸಂಗವಾಗದ ಬಾಳು ಬಾಳು ಆಗದಯ್ಯ ||ಪ || ಸಾಧು ಸಂಗ ಎಂಬೊದಯ್ಯ ಕ್ಷೇಮ ನಮಗೆ ನೀಡುವುದಯ್ಯ ||ಅ|| ಉದಯದಲಿ ಎದ್ದು ಹರಿಯ ನಾಮವನ್ನು ಒದರಿಯೊದರಿ ಸತತವು ನಿರ್ಮಲನಾಗಿ ನಾರದವಂದ್ಯನ ಪಾಡಿ ಆಡುವಂಥ || ತನ್ನ ಮರೆತು ಘನ್ನಮಹಿಮನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರೊಕ್ಕ ಎರಡಕ್ಕು ದುಃಖ ಕಾಣಕ್ಕ

( ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ) ರೊಕ್ಕ ಎರಡಕ್ಕು ದುಃಖ ಕಾಣಕ್ಕ ||ಪ || ಮಕ್ಕಳ ಮರಿಗಳ ಮಾಡೋದು ರೊಕ್ಕ ಸಕ್ಕರೆ ತುಪ್ಪವ ಸವಿಸೋದು ರೊಕ್ಕ ಕಕ್ಕುಲತೆಯನು ಬಿಡಿಸೋದು ರೊಕ್ಕ ಘಕ್ಕನೆ ಹೋದರೆ ಘಾತ ರೊಕ್ಕ || ನೆಂಟರ ಇಷ್ಟರ ಮರೆಸೋದು ರೊಕ್ಕ
ದಾಸ ಸಾಹಿತ್ಯ ಪ್ರಕಾರ
ಬರೆದವರು