ಪಥ ನಡೆಯದಯ್ಯ

( ರಾಗ ಮುಖಾರಿ ಝಂಪೆ ತಾಳ) ಪಥ ನಡೆಯದಯ್ಯ ಪರಲೋಕಕೈದುವರೆ(/ ಪರಲೋಕಕೈದುವೊಡೆ ?) ||ಪ|| ಮನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ||ಅ || ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ ಬಲವೆರಸಿ ಮದನ ಮಾರ್ಗವ ಕಟ್ಟಲು ಬಲವುಳ್ಳ ಭಟರು(/ಭಕ್ತ) ಬಲು ಸನ್ಯಾಸಿ ಯೋಗಿಗಳು ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು || ತನುರೋಮ ಗಿಡವೃಕ್ಷ ಥಳಥಳಿಪ ಲತೆ ಮೆರೆವ ಘನಸಿಂಹ ಖಗಮೃಗಗಳಟ್ಟಣಿಸುವ ವನಿತೆಯರ ಕಾಯಕಾಂತಾರದಲಿ ದುರ್ಗಮ ಸ್ತನಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ || ಕಾಳಗದೊಳಿದಿರಿಲ್ಲ ಸುರನರೋರಗರ(/ಸುರರು ದುರ್ಜನರು) ಕ- ಟ್ಟಾಳು ಮನ್ಮಥನ ಛಲದಂಕ ಬಿರುದು ಪೇಳಲೆನ್ನಲಳವಲ್ಲ ಪುರಂದರವಿಠಲನ ( /ಬಾಡದಾದಿಕೇಶವನೊಲವಿನ ) ಆಳು ಸಂಗಡವಿದ್ದವರಗೆ ಭಯವಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು

( ರಾಗ ಆರಭಿ ಅಟ ತಾಳ) ಪಾಪಿಗಳೊಳಗೆಲ್ಲ ನಾನು ವೆಗ್ಗಳನೆಂದು ತಿಳಿಯಲಿಲ್ಲ , ದಯಾ- ರೂಪ ಕೃಪಾಂಬುಧಿ ನೀನಲ್ಲದಿಲ್ಲವೆಂದರಿಯಲಿಲ್ಲ || ಕಾಲ್ಗಳಿಂದಲಿ ತೀರ್ಥಯಾತ್ರೆಯ ನಾನಂತೂ ಮಾಡಲಿಲ್ಲ , ಹರಿ- ಪಾಲ್ಗಡಲಶಾಯಿ ನಿನ್ನ ದಿವ್ಯಕಥೆಯನ್ನು ಕೇಳಲಿಲ್ಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೋಗೆ ಪೋಗೆ ನೀನು

( ರಾಗ ಕಾಪಿ ಆದಿ ತಾಳ) ಪೋಗೆ ಪೋಗೆ ನೀನು ||ಪ || ಪೋಗೆ ಸಖಿ ಪೋಗಿ, ನೀ ಕೃಷ್ಣನ ತೋರೇ ||ಅ || ಬೃಂದಾವನದಲ್ಲಿ ಆಡುವ ಗೋಕುಲ ಕಂದನ ನೀನು ತೋರೇ || ಗೋವರ್ಧನದಲ್ಲಿ ಗೋವುಗಳನ್ನು ಕಾಯ್ದ ಗೋಕುಲ ನಂದನ ನೀನು ತೋರೇ || ಪನ್ನಗ ಶಯನ ಶ್ರೀ ಪುರಂದರವಿಠಲನ ಮನ್ನಿಸಿ ಬೇಗನೆ ತೋರೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ

( ರಾಗ ಶಂಕರಾಭರಣ ಅಟ ತಾಳ) ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ || ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅ || ಸುರ ಮುನಿಗಳು ತಮ್ಮ ಹೃದಯಗಹ್ವರದಲ್ಲಿ ಪರಮಾತ್ಮನ ಕಾಣದೆ ಅರಸುವರೊ ದೊರಕದ ವಸ್ತುವಿಂದು ದೊರಕಿದು ತಮಗೆಂದು ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸು ಲೋಕನಾಯಕನೆ

( ರಾಗ ಶಂಕರಾಭರಣ ಅಟ ತಾಳ) ರಕ್ಷಿಸು ಲೋಕನಾಯಕನೆ, ನೀ ರಕ್ಷಿಸು ||ಪ|| ಎಷ್ಟೆಷ್ಟು ಜನ್ಮವ ಕಳೆದೆನೊ ಇ- ನ್ನೆಷ್ಟೆಷ್ಟು ಜನ್ಮವ ಕಳೆವೆನೊ ಕಷ್ಟವ ಪಡಲಾರೆ ಕೃಷ್ಣ ಕೃಪೆಯಿಟ್ಟು ಇಷ್ಟವ ಪಾಲಿಸೊ ಇಭರಾಜವರದನೆ || ಬಾಲತನದಿ ಬಹು ಬೆಂದೆನೊ, ನಾನಾ ಲೀಲೆಯಿಂದಲಿ ಕಾಲ ಕಳೆದೆನೊ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂಥಾ ಪಾವನ ಪಾದವೊ ರಂಗಯ್ಯ

ಎಂಥಾ ಪಾವನ ಪಾದವೊ ರಂಗಯ್ಯ ಇನ್ನೆಂಥಾ ಚೆಲುವ ಪಾದವೊ |ಪ| ಎಂಥಾ ಪಾವನ ಪಾದ ಇಂತು ಜಗದಿ ಕೇಳು ಪಂಥದೊಳಿಹ ಕುರುಪತಿಯನುರುಳಿಸಿದಾ |ಅ.ಪ| ಹಲವು ಕಾಲಗಳಿಂದ ಮಾರ್ಗದಿ ಶಿಲೆ ಶಾಪ ಪಡೆದಿರಲು| ಒಲಿದು ರಜದಿ ಪಾವನಗೈದು ಕರುಣದಿ ಶಿಲೆಯ ಬಾಲೆಯ ಮಾಡಿ ಸಲಹಿದ ಹರಿಯ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ

ರಾಗ: ಮಧ್ಯಮಾವತಿ, ಆದಿತಾಳ ಮರುಳು ಮಾಡಿಕೊಂಡೆಯಲ್ಲ ಮಾಯಾದೇವಿಯೆ | ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ || ಪಲ್ಲವಿ|| ಚರಣಗಳು: ಜ್ಞಾನಿಗಳು ನಿತ್ಯ ಪಾನಾದಿಗಳನ್ನು ಬಿಟ್ಟು ನಾನಾ ವಿಧ ತಪವಿದ್ದರು ಧ್ಯಾನಕ್ಕೆ ಸಿಲುಕದವನ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಜಭೋಗಕಿಂತಧಿಕ ಭೋಗವುಂಟೆ

( ರಾಗ ಮಧ್ಯಮಾವತಿ ಝಂಪೆ(/ಅಟ) ತಾಳ)

 

ರಾಜಭೋಗಕಿಂತಧಿಕ ಭೋಗವುಂಟೆ || ಪ ||

ರಾಜೀವಾಕ್ಷನಿಗಿಂತಧಿಕ ದೈವವುಂಟೆ ||ಅ ||

 

ಶರೀರ ಧರ್ಮ ಅರಿಯದಗೆ ಜಾಗ್ರವುಂಟೆ

ಗುರುವಿಂದಲಧಿಕ ಮುಕ್ತಿಯನೀವರುಂಟೆ

ಮರಣಕಿಂತಧಿಕ ವೆಗ್ಗಳ ಭಯವುಂಟೆ

ಸಿರಿ ತೊಲಗಿದ ಮೇಲೆ ಸುಖವೆಂಬುದುಂಟೆ ||

 

ಮೂಢನೆಂಬವಗೆ ಬಲ್ಲವಿಕೆ ತಾನುಂಟೆ

ಹೇಡಿಯಾದವಗೆ ದೈರ್ಯದ ಬಲವುಂಟೆ

ಪಾಡಲರಿಯದವಗೆ ಸ್ವರಭೇದವುಂಟೆ

ಗಾಡಿಗಾತಿಯರಿಗೆ ಪತಿ ಭಕ್ತಿಯುಂಟೆ ||

 

ನುಡಿಯಬಲ್ಲವಗೆ ಕಲಹವೆಂಬುದುಂಟೆ

ಕೊಡಬಲ್ಲವಗೆ ಲೋಭದ ತೊಡರುಂಟೆ

ಜಡ ಮುಸುಕಿದಗೆ ವಿದ್ಯೆಯ ಬಲವುಂಟೆ

ಒಡೆಯ ಪುರಂದರವಿಠಲಗೆಣೆಯುಂಟೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಪೂಜೆ ಯಾತಕೋ, ಮನುಜ

( ರಾಗ ತೋಡಿ ರೂಪಕ ತಾಳ) ಪೂಜೆ ಯಾತಕೋ, ಮನುಜ ಪೂಜೆ ಯಾತಕೋ ||ಪ || ಪೂಜೆಯಲಿ ನಿನ್ನ ಮನ ನಿಲ್ಲದಿದ್ದ ಮೇಲೆ ನಿನಗೆ ||ಅ || ಭೂತದಯಾ ಪಶ್ಚಾತ್ತಾಪ ನೀತಿಯೆಂಬುದು ಮತ್ತಿಲ್ಲ ಮಾತಿನಲಿ ಜ್ಞಾನಿಯಲ್ಲ ಕೋತಿ ಬುದ್ಧಿ ಬಿಡಲಿಲ್ಲ || ಹಾಕುವುದು ಸಾಧುವೇಷ ಸಾಕುವುದು ಹಲವು ದೋಷ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಾಮಕೃಷ್ಣರು ಮನೆಗೆ ಬಂದರು

( ರಾಗ ಜಂಜೂಟಿ ಆದಿ ತಾಳ) ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೆ ||ಪ || ಕಾಮಧೇನು ಬಂದಂತಾಯಿತು ವರವ ಬೇಡಿರೆ ||ಅ || ಚೆಂಡು ಬುಗರಿ ಚಿಣ್ಣಿಕೋಲು ಗಜ್ಜಗವಾಡುತ ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ
ದಾಸ ಸಾಹಿತ್ಯ ಪ್ರಕಾರ
ಬರೆದವರು