ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ

( ರಾಗ ಶ್ರೀ. ಅಟ ತಾಳ) ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ಪಾಲಿಸೆ ಎನ್ನನು ಪಾಲಾಬ್ಧಿಸಂಜಾತೆ ||ಪ|| ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿಮಾನಿ ಸಾರಸಾಕ್ಷಿ ಶ್ರೀಧರರಮಣಿ ಕಾದುಕೋ ನಿನ್ನಯ ಪಾದ ಸೇವಕರನ್ನು ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ || ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ ದಯ ಪಾಲಿಸೆ ಮಾತೆ ತ್ರೈಲೋಖ್ಯವಿಖ್ಯಾತೆ ಜಯದೇವಿ ಸುವ್ರತೆ ಹಯವದನನ ಪ್ರೀತೆ || ನೀನಲ್ಲದನ್ಯ ರಕ್ಷಿಪರನು ಕಾಣೆ ನಾ ಮುನ್ನ ದಾನವಾಂತಕ ಸಿರಿಪುರಂದರವಿಠಲನ ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು