ಹರಿಕಥೆಯ ಕೇಳುವ ಜನರು

ಹರಿಕಥೆಯ ಕೇಳುವ ಜನರು, ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ|| ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ ಕಲ್ಲು ಹೋಹದು(?) ಎನ್ನ ಕೈಯಲೆಂದು ಫುಲ್ಲನಾಭನ ಕಥೆಯ ಪೂರೈಸಿ ಕೇಳದೆ ಕಲ್ಲುಗೋವಿನ ಹಾಲು ಕರುವು ಬಯಸುವಂತೆ || ಪರರ ನಿಂದೆಗಳ ಬಿಡದೆ ತಾವಾಡುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಜಾಲಿಯ ಮರದಂತೆ ಧರೆಯೊಳು ದುರ್ಜನರು

ಜಾಲಿಯ ಮರದಂತೆ ಧರೆಯೊಳು ದುರ್ಜನರು ಜಾಲಿಯ ಮರದಂತೆ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ || ಬಿಸಿಲಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣೂ ಇಲ್ಲ ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವದವೂ ವಿಷದಂತೆ ಇರುತಿಹ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಯನಿವಾರಣವು ಶ್ರೀಹರಿಯ ನಾಮ (ಉದಯರಾಗ)

ಭಯನಿವಾರಣವು ಶ್ರೀಹರಿಯ ನಾಮ ಜಯಪಾಂಡುರಂಗ ವಿಟ್ಠಲ ನಿಮ್ಮ ನಾಮ ಧಾರಿಣೀ ದೇವಿಗಾಧಾರವಾಗಿಹ ನಾಮ ನಾರದರು ನಲಿನಲಿದು ನೆನೆವ ನಾಮ || ಘೋರ ಪಾತಕಿ ಅಜಾಮಿಳನ ಸಲಹಿದ ನಾಮ ತಾರಕವು ಬ್ರಹ್ಮಭವರಿಗೆ ನಿಮ್ಮ ನಾಮ ಮೊರೆಯ ಲಾಲಿಸಿ ಮುನ್ನ ಗಜನ ಸಲುಹಿದ ನಾಮ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ

ಏನು ಬೇಡಲಿ ನಿನ್ನ ಬಳಿಗೆ ಬಂದು

ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿಟ್ಟ ಸೌಭಾಗ್ಯ ನಿಬಿಡವಾಗಿದೆ ಎನಗೆ || ಪ || ಜನನಿಯ ಕೊಡು ಎಂದು ಜಯವಂತ ಬೇಡುವೆನೆ ಜನನಿ ಏನಿತ್ತಳಾ ಧ್ರುವರಾಜಗೆ ಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ || ೧ || ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ
ದಾಸ ಸಾಹಿತ್ಯ ಪ್ರಕಾರ

ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ?

ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ ||ಪಲ್ಲವಿ|| ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ|| ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ ||೧||
ದಾಸ ಸಾಹಿತ್ಯ ಪ್ರಕಾರ

ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ

ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾ ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ ದೋಷ ದೂರಾರಾ ಆದಿ ಶೇಷವೇಷರಾ || ೨ || ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ
ದಾಸ ಸಾಹಿತ್ಯ ಪ್ರಕಾರ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ || ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ ಪ || ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರಪುಷ್ಕರಣಿ ಸಾನವ ಮಾಡಿ ಆ ನಂದದಿಂದಲಿ ರಂಗನ ನೋಡದ || ೧ || ಹರಿಪಾದೋದಕ ಸಮ ಕಾವೇರಿ ವಿರಜಾನದಿ ಸಾನವ ಮಾಡಿ
ದಾಸ ಸಾಹಿತ್ಯ ಪ್ರಕಾರ

ಪವನ ಸಂಭೂತ ಒಲಿದು ತವಕದಿ ಕಾಯಬೇಕು

ಪವನ ಸಂಭೂತ ಒಲಿದು ತವಕದಿ ಕಾಯಬೇಕು ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ|| ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧|| ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||
ದಾಸ ಸಾಹಿತ್ಯ ಪ್ರಕಾರ

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ

ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ | ಪ | ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ | ೧ |
ದಾಸ ಸಾಹಿತ್ಯ ಪ್ರಕಾರ

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ ನಿನ್ನಯ ಪಾದಾರ ವಿಂದವ ತೋರೋ ಮುಕುಂದನೆ |ಪ| ಸುಂದರ ವದನನೆ ನಂದಗೋಪನ ಕಂದ ಮಂದರೋದ್ಧಾರ ಆನಂದ ಇಂದಿರಾ ರಮಣ |ಅಪ| ನೊಂದೆನಯ್ಯ ಭವಬಂಧನದೊಳು ಸಿಲುಕಿ ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು ಕಂದನಂತೆಂದೆನ್ನ ಕು೦ದುಗಳೆಣಿಸದೆ
ದಾಸ ಸಾಹಿತ್ಯ ಪ್ರಕಾರ