ಹರಿಕಥೆಯ ಕೇಳುವ ಜನರು

ಹರಿಕಥೆಯ ಕೇಳುವ ಜನರು

ಹರಿಕಥೆಯ ಕೇಳುವ ಜನರು, ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ|| ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ ಕಲ್ಲು ಹೋಹದು(?) ಎನ್ನ ಕೈಯಲೆಂದು ಫುಲ್ಲನಾಭನ ಕಥೆಯ ಪೂರೈಸಿ ಕೇಳದೆ ಕಲ್ಲುಗೋವಿನ ಹಾಲು ಕರುವು ಬಯಸುವಂತೆ || ಪರರ ನಿಂದೆಗಳ ಬಿಡದೆ ತಾವಾಡುತ ಮರೆತೆನೆ ಮನೆಯ ಬಾಗಿಲು ಹಾಕಲು ಕರುವು ಕಟ್ಟಲಿಕೆ ಮರೆತು ಬಂದೆನೆಂಬ ಈ ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು || ಗಂಡನ ಲಂಡತನಗಳ ದೂರುತ ಮಂಡೆಯ ಹುಡುಕುತ್ತ ಪುಂಡರೀಕಾಕ್ಷನ ಕಥೆ ಪೂರೈಸಿ ಕೇಳದವರಿಗೆ ದಂಡಿಪ ಪುರಂದರ ವಿಠಲನೆಂದರಿಯದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು