ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ?
ಮಹಿಮೆ ಸಾಲದೆ ಇಷ್ಟೆ ಮಹಿಮೆ ಸಾಲದೆ ||ಪಲ್ಲವಿ||
ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ||
ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ ||೧||
ವಿಪ್ರಗೆ ಬ್ರಹ್ಮಹತ್ಯೆ ದೋಷ ಬರಲು ಕ್ಷಿಪ್ರ ಶಂಖೋದಕದಿ ಕಳೆಯೆ
ಅಪ್ರಬುದ್ಧರು ದೂಷಿಸೆ ಗೇರೆಣ್ಣೆ ಕಪ್ಪು ವಸನ ಹಸನ ಮಾಡಿದ ||೨||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಕಂಗಳನು ಭುಂಜಿಸೆ
ನರರು ನಗಲು ಶ್ರೀಶ ಕೃಷ್ಣನ ಕರುಣದಿಂದ ಹಸಿಯ ಮಾಡಿದ ||೩||
ದಾಸ ಸಾಹಿತ್ಯ ಪ್ರಕಾರ
- Log in to post comments