ಫಲಹಾರವನೆ ಮಾಡೋ

ಫಲಹಾರವನೆ ಮಾಡೋ ಪರಮಪುರುಷನೆ ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ || ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ ಕೊಬ್ಬಿದ ದ್ರಾಕ್ಷಿ ಹಲಸು ತೆಂಗು ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು ಇಬ್ಬದಿಯಲಿ ಇಟ್ಟ ಶೇಷಫಲಂಗಳು || ನೆನೆಗಡಲೆ ಬೇಳೆ ಲಡಿಗೆ ಮೂಗದಾಳು*
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆ ರಣಾಗ್ರದಿ ಭೀಮಗಡ್ಡೈಪರಾರು

ಆ ರಣಾಗ್ರದಿ ಭೀಮಗಡ್ಡೈಪರಾರು ? ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? || ನಾನಾ ದೇಶದ ಭೂನಾಯಕರಿದ್ದರಲ್ಲವೆ ? ತಾನು ದುಶ್ಶಾಸನನು ತತ್ತರಿಸುವಾಗ ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ? ಆನೆಯ ಕೈಯ ಕಬ್ಬಿಗೆ ಅಂಗಯಿಸುವವರಾರು ? ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೇಳು ಕೋಪಿಸಬೇಡ ಹೇಳಲಿಕಂಜುವೆನು

ಕೇಳು ಕೋಪಿಸಬೇಡ, ಹೇಳಲಿಕಂಜುವೆನು ಬಾಳು ಬಡತನವ ನಾನು || ತಲೆಗೊಯ್ಕ ಹಿರಿಯ ಮಗ , ಇಳೆಗೆ ಪೂಜಿತನಲ್ಲ ಬಲು ಭಂಡ ನಿನ್ನಯ ಕಿರಿಯ ಮಗ, ಲಲನೆಯು ಸೇರಿದಳು , ಬಲು ಲೋಭಿಗಳ ಮನೆಯ ಹೊಲೆ ಕುಲವರಿಯಳು ನಿನ್ನ ಸೊಸೆಯು ರಂಗ || ಮಗಳ ಮಾರ್ಗವು ಡೊಂಕು , ಮೈದುನ ಗುರುದ್ರೋಹಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹೊನ್ನು ತಾ ಗುಬ್ಬಿ....

ರಾಗ : ಸಿಂಧು ಬೈರವಿ ರೂಪಕ ತಾಳ ಹೊನ್ನು ತಾ ಗುಬ್ಬಿ ಹೊನ್ನು ತಾ ಚಿನ್ಮಯ ಮೂರುತಿ ಚೆಲುವ ರಂಗನ ಕೈಗೆ ಹೊನ್ನು ತಾ ಗುಬ್ಬಿ ಹೊನ್ನು ತಾ..... ಆಗಮವನು ತಂದು ಜಗಕಿತ್ತ ಕೈಗೆ ಸಾಗರವನು ಮಥಿಸಿ ಸುಧೆ ತಂದ ಕೈಗೆ ತೂಗಿ ಮಾತಾಡುವ ಸ್ಥೂಲಕಾಯನ ಕೈಗೆ
ದಾಸ ಸಾಹಿತ್ಯ ಪ್ರಕಾರ

ಮುಖ್ಯಪ್ರಾಣದೇವ

ರಾಗ : ಮಧ್ಯಮಾವತಿ ಏಕತಾಳ ಮುಖ್ಯಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೇ ಪ್ರಾಣ ಪಾನಾ ವ್ಯಾನೋದಾನ ಸಮಾನನೇನೆನಿಪ....... ವಾಸವ ಕುಲಿಶದಿ ಘಾಸಿನೆ ಜೀವಕ ಶ್ವಾಸ ನಿರೋಧಿಸಿದೆ.. ಆ ಸಮಯದಿ ಕಮಲಾಸನ ಪೇಳಲು, ನೀ ಸಲಹಿದೆ ಜಗವಾ....
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಜರೇ ಹನುಮಂತಂ....

ರಾಗ : ಭಾಗೇಶ್ರೀ ಆದಿತಾಳ ಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ.... ಕೋಮಲ ಕಾಯಂ, ನಾಮಸುದೇವಂ ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ..|| ಮೂರ್ಖ ನಿಶಾಚರ ವನಸಂಹಾರಂ ಸೀತಾ ದು:ಖವಿನಾಶನ ಕಾರಂ..|| ಪರಮಾನಂದ ಗುಣೋದಯ ಚರಿತಂ ಕರುಣಾರಸ ಸಂಪೂರ್ಣಸುಭರಿತಂ..||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಈ ಜೀವ ಈ ದೇಹ

ರಾಗ : ಕಲ್ಯಾಣವಸಂತ ಖಂಡಛಾಪುತಾಳ ಈ ಜೀವ ಈ ದೇಹ ಇದ್ದು ಫಲವೇನೋ ರಾಜೀವ ನೇತ್ರನಾ ನೋಡದ ಮೇಲೇ ರಂಗರಾಜನ ಪಾದ ಭೃಂಗನೆಂದೆನಿಸುವಾ ತುಂಗ ಪಾದವ ತೊಳೆದು ತೀರ್ಥವಾವಹಿಸಿ ಹಿಂಗದೆ ಪ್ರತಿದಿನ ಹಿರಣ್ಯಾರಿ ದೇವನ್ನ ಮಂಗಳಪ್ರದನಾದ ರಂಗನ ನೋಡದ ಮೇಲೇ ..||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೇಮವಿಲ್ಲದ ಹೋಮವೇತಕೆ

ನೇಮವಿಲ್ಲದ ಹೋಮವೇತಕಯ್ಯ ರಾಮನಾಮವಲ್ಲದೆ ಮತ್ತೆ ನಮಗೊಂದೆ ನೀರ ಮುಳುಗಲೇಕೆ ನಾರಿಯ ಬಿಡಲೇಕೆ ವಾರಕೊಂದುಪವಾಸ ಇರಲೇತಕೆ ನಾರಸಿಂಹನ ದಿವ್ಯನಾಮವನು ನೆನೆದರೆ ಘೋರ ಪಾತಕವೆಲ್ಲ ತೊಲಗಿ ಹೋಗುವುದು ಅಂಬರದೊಳಿರಲೇಕೆ ತಾಂಬೂಲವ ಬಿಡಲೇಕೆ ಡಂಬಕತನದಲಿ ಇರಲೇತಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ವರಕವಿಗಳ ಮುಂದೆ ನರಕವಿಗಳು

( ರಾಗ ಸೌರಾಷ್ಟ್ರ , ಅಷ್ಟ ತಾಳ) ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಪಾಪಿಗಳಿದ್ದಲ್ಲಿಗೆ ರೂಪುಳ್ಳ ವಸ್ತುವ ತೋರಬಾರದು , ಬಹು ಕೋಪಿಗಳಿದ್ದಲ್ಲಿ ಅನುಭವ ಗೋಷ್ಠಿಯ ಮಾಡಬಾರದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏನ ಬೇಡಲಿ ನಿನ್ನ ಚಂಚಲ ಕಠಿಣನ

ಏನ ಬೇಡಲಿ ನಿನ್ನ, ಚಂಚಲ ಕಠಿಣನ ಮೌನದಿಂದಲಿ ಮೋರೆ ಓರೆ ಮಾಡುವನ|| ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ ಅರಣ್ಯ ತಿರುಗುವವವ ತಿರುಗಿ ಬೆಣ್ಣೆ ಕದ್ದು ತಿಂಬುವನ || ವಾಸಶೂನ್ಯನ ಕೈಯ ಕತ್ತಿ ಬೀಸಿ ಸವರುವನ ಕಾಸುವೀಸವನೆಲ್ಲ ಮೀಸಲು ಮಾಡಿಟ್ಟು
ದಾಸ ಸಾಹಿತ್ಯ ಪ್ರಕಾರ
ಬರೆದವರು