ಜಗದುಧ್ಧಾರನ ಆಡಿಸಿದಳೆಶೋದೆ

ಜಗದುಧ್ಧಾರನ ಆಡಿಸಿದಳೆಶೋದೆ

ರಾಗ ಹಿಂದೂಸ್ಥಾನಿ ಕಾಪಿ/ಆದಿ ತಾಳ ಜಗದುಧ್ಧಾರನ ಆಡಿಸಿದಳೆಶೋದೆ || ಪಲ್ಲವಿ || ಜಗದುಧ್ಧಾರನ ಮಗನೆಂದು ತಿಳಿಯುತ ಸುಗುಣಾಂತರಂಗನ ಆಡಿಸಿದಳೆಶೋದೆ || ೧ || ನಿಗಮಕೆ ಸಿಲುಕದ ಅಗಣಿತ ಮಹಿಮನ ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ || ೨ || ಅಣೋರಣೀಯನ ಮಹತೋಮಹೀಯನ ಅಪ್ರಮೇಯನ ಆಡಿಸಿದಳೆಶೋದೆ || ೩ || ಪರಮಪುರುಷನ ಪರವಾಸುದೇವನ ಪುರಂದರವಿಠಲನ ಆಡಿಸಿದಳೆಶೋದೆ || ೪ || ~~~~ * ~~~~ ಜಗದುಧ್ಧಾರನ - ಜಗತ್ತನ್ನು ಎತ್ತಿ (ಉತ್) ಹಿಡಿದು (ಧೃ) ಕಾಪಾಡುವವನನ್ನು. ಸುಗುಣಾಂತರಂಗನ - ಸತ್ವಗುಣವೊಂದೇ ಸ್ವಭಾವವಾಗಿ ಉಳ್ಳವನನ್ನು. ನಿಗಮಕೆ ಸಿಲುಕದ - ವೇದಗಳು ಕೂಡ ಯಾವನ ನೆಲೆಯನ್ನು ಅರಿಯಲಾರವೋ ಅವನ. ಅಗಣಿತ ಮಹಿಮನ - ಯಾವನ ಹಿರಿಮೆಯನ್ನು ಇಷ್ಟೆಂದು ಹೇಳಬರುವುದಿಲ್ಲವೋ ಅವನ. ಅಣೋರಣೀಯನ - ಅತಿ ಸಣ್ಣದಾದ ಅಣುವಿಗಿಂತ ಸಣ್ಣವನು (ಅದರಲ್ಲೂ ಅಂತರ್ಯಾಮಿಯಾಗಿ ಸೂಕ್ಷ್ಮವಾಗಿರುವನು); ಅತಿ ದೊಡ್ಡದಕ್ಕಿಂತ (ಎಂದರೆ ಆಕಾಶಕ್ಕಿಂತ) ದೊಡ್ಡವನು (ಅದೂ ಅವನಲ್ಲಿಯೇ ನೆಲೆಗೊಂಡಿದೆಯಾಗಿ), ಎಂದರೆ ಸರ್ವವ್ಯಾಪಿ, ಸರ್ವಾಧಾರ. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು