ಹೂವ ತರುವರ ಮನೆಗೆ

ಹೂವ ತರುವರ ಮನೆಗೆ

(ರಾಗ ಕಾಂಭೋಜ ಝಂಪೆ ತಾಳ ) ಹೂವ ತರುವರ ಮನೆಗೆ ಹುಲ್ಲ ತರುವ ಅವ್ವೆ ಲಕುಮಿಪತಿ ಇವಗಿಲ್ಲ ಗರುವ || ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮನದಲಿ ಸಾಧುಶಯನ ಮುಕುಂದ ಎನೆ ಎಂದೆಂದು ವಾಸಿಪನಾಮಂದಿರದೊಳಗೆ || ಪರಿಪರಿಯ ಪುಷ್ಪಗಳ ಪರಮಾತ್ಮಗರ್ಪಿಸಿ ಪರಿಪೂರ್ಣನೆಂದು ಪೂಜೆಯನು ಮಾಡೆ ಪರಮ ಆಸಕ್ತಿಯಲಿ ಸೇವೆಯನು ಮಾಡಿದರೆ ಸರಿಭಾಗ ಕೊಡುವ ತನ್ನರಮನೆಯೊಳಗೆ || ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ಹುಲ್ಲನು ತಿನಿಸಿದ ಅಂಡಜವಾಹನ ಶ್ರೀಪುರಂದರವಿಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು