ಆರು ಹಿತವರು ನಿಮಗೆ ಈ ಮೂವರೊಳಗೆ ?

ಆರು ಹಿತವರು ನಿಮಗೆ ಈ ಮೂವರೊಳಗೆ ?

(ರಾಗ ಮುಖಾರಿ ಝಂಪೆತಾಳ) ಆರು ಹಿತವರು ನಿಮಗೆ ಈ ಮೂವರೊಳಗೆ ? ನಾರಿಯೊ ಧಾರಿಣಿಯೊ ಬಲುಭವದ ಸಿರಿಯೊ ? || ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಗವಳ ಯಜಮಾನಿಯೆನಿಸಿ ಭಿನ್ನವಲ್ಲದಲರ್ಧ ದೇಹವೆನಿಸುವ ಸತಿಯು ಕಣ್ಣಿನಲಿ ನೋಡಲಮ್ಮಳು ಕಾಲವಶದಿ || ಮುನ್ನ ಶತಕೋಟಿ ರಾಯರುಗಳಾಳಿದ ನೆಲವ ತನ್ನದೆಂದೆನುತ ಶಾಸನವ ಬರೆಸಿ ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ ಚೆನ್ನಿಗನಸುವಳಿಯೆ ಹೊರಗೆ ಹಾಕುವರು || ಉದ್ಯೋಗ ವ್ಯವಹರ ನೃಪಸೇವೆ ಕುಶಲಗತಿ ಕ್ಷುದ್ರತನ ಕಳವು ಪರದ್ರೋಹದಿಂದ ಬುದ್ಧಿಯಿಂದಲೆ ಗಳಿಸಿ ಸಿಕ್ಕಿದಂಥರ್ಥವನು ಸದ್ಯದಲ್ಲಾರು ಉಂಬುವರು ಹೇಳು ಮನುಜ || ಶೋಕವನು ಗೈಯುವರು ಸತಿಸುತರು ಬಾಂಧವರು ಜೋಕೆ ತಪ್ಪಿದ ಬಳಿಕ ಅರ್ಥ ವ್ಯರ್ಥ ಲೋಕದೊಳು ಗಳಿಸಿದ ಪುಣ್ಯಪಾಪಗಳೆರಡು ಸಾಕಾರವಾಗಿ ಸಂಗಡ ಬಾಹೋದಲ್ಲದೆ || ಅಸ್ಥಿರದ ದೇವನು ನೆಚ್ಚಿ ನಂಬಲು ಬೇಡ ಸ್ವಸ್ಥದಲಿ ನೆನೆ ಕಂಡ್ಯ ಹರಿಪಾದವ ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೇ ಉತ್ತಮೋತ್ತಮನೆಂದು ಸುಖಿಯಾಗು ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು