ತೆಗೆ ನಿನ್ನ ಮುಸುಕವನು

ತೆಗೆ ನಿನ್ನ ಮುಸುಕವನು

(ರಾಗ ನಾದನಾಮಕ್ರಿಯೆ ) ತೆಗೆ ನಿನ್ನ ಮುಸುಕವನು ||ಪ|| ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು ||ಅ|| ಗೋವ ಕಾಯಲು ಪೋಗಿ ಧಾವತಿಪಟ್ಟು ಬಹು ದೇವಕಿದೇವಿಯೆ ಈವಾಗ ಬಂದೆನು || ಕಾಳಿಯ ಮಡುವಿಲಿ ಏಳು ಹೆಡೆಯ ಮೇಲೆ ಕಾಳಿಂಗನ ತುಳಿದು ಭಾಳ ಶ್ರಮದಿ ಬಂದೆ || ಉಟ್ಟ ಸೀರೆಯ ಬಿಟ್ಟು ದಿಟ್ಟ ಬಾಲೆಯರಿರಲು ಥಟ್ಟನೆ ಸೆಳೆದೊಯ್ದು ಕಷ್ಟ ಬಟ್ಟೆ ಮರವೇರಿ || ವಿಷದ ಮೊಲೆಯನುಂಡು ಕಸವಸಿಬಡುತಿಹೆ ನಸುನಗೆಯಲಿ ಉಂಬೆ ಹಸಿವೆ ಬಹಳಾಗಿದೆ || ತ್ವರದಿ ತೊಡೆಯ ಮೇಲೆ | ಕರೆದು ಕೂಡಿಸು ತಾಯಿ ಪುರಂದರವಿಠಲ ವರದ ಸರ್ವೋತ್ತಮಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು