ಬೇಡವೋ ಬ್ರಹ್ಮದ್ರೋಹ

ಬೇಡವೋ ಬ್ರಹ್ಮದ್ರೋಹ

( ರಾಗ ಶಂಕರಾಭರಣ. ಅಟ ತಾಳ) ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ|| ಹೊತ್ತಿಹೆ ನರಜನ್ಮವನ್ನು ,ಪಾದ ಸುತ್ತಿ ಕೊಂಡಿಹುದಲ್ಲೊ ನೀನು ಆಹಾ ಚಿತ್ತದೊಳಗೆ ನೋಡು ಉತ್ತಮ ವಿಪ್ರರ ವೃತ್ತಿಯ ಕಳೆದು ಉನ್ಮತ್ತನಾಗಲು ಬೇಡ ಸೂಸುವ ನದಿಯಲ್ಲಿ ಬಿದ್ದು ಮುಂದೆ ಈಸಲಾರದೆ ಮುಳುಗೆದ್ದು ಆಹಾ ಈಸೋ ಕಾಯನೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿ ಈಸುವ ತೆರದಿ ಈ ಭೂಸುರರಾ ದ್ರವ್ಯ ಇನ್ನೆಷ್ಟು ಪೇಳಲಿ ಸಾಕ್ಷಿ ಬ್ರಾಹ್ಮ- ರನ್ನವ ತೆಗೆವನ ಶಿಕ್ಷಿ ಆಹಾ ಪನ್ನಗಶಯನ ಪುರಂದರ ವಿಠಲನು ಬೆನ್ನ ಬಿಡದೆ ಬ್ರಾಹ್ಮರನ್ನು ಕಾದಿರುವನು
ದಾಸ ಸಾಹಿತ್ಯ ಪ್ರಕಾರ
ಬರೆದವರು