ಮುರಹರ ನಗಧರ ನೀನೆ ಗತಿ

ಮುರಹರ ನಗಧರ ನೀನೆ ಗತಿ

ರಾಗ ಆರಭಿ/ತಾಳ ಆದಿ ಮುರಹರ ನಗಧರ ನೀನೆ ಗತಿ || ಪಲ್ಲವಿ || ಧರಣೀ ಲಕ್ಷ್ಮೀಕಾಂತ ನೀನೆ ಗತಿ || ಅನುಪಲ್ಲವಿ || ಶಕಟಮರ್ದನ ಶರಣಾಗತವತ್ಸಲ ಮಕರ ಕುಂಡಲಧರ ನೀನೆ ಗತಿ ಅಕಳಂಕಚರಿತ ಆದಿನಾರಾಯಣ ರುಕುಮಿಣಿಪತಿ ಕೃಷ್ಣ ನೀನೆ ಗತಿ || ೧ || ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯಪ್ರಮಿತ ಮೆದ್ದ ಹರಿ ನೀನೆ ಗತಿ || ೨ || ಪನ್ನಗಶಯನ ಸುಪರ್ಣಗಮನ ಪೂರ್ಣಚರಿತ ಹರಿ ನೀನೆ ಗತಿ ಹೊನ್ನ ಹೊಳೆಯಲಿ ಪುರಂದರವಿಠಲ ಚೆನ್ನ ಲಕ್ಷ್ಮೀಕಾಂತ ನೀನೆ ಗತಿ || ೩ || ~~~*~~~ ಬೆಣ್ಣೆಯಪ್ರಮೀತ - ಅಪರಿಮಿತನಾಗಿ, ಎಂದರೆ ಬೇಕಾದಷ್ಟು, ಬೆಣ್ಣೆಯನ್ನು. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು