ನಾಯಿ ಬಂದದಪ್ಪ

(ರಾಗ ಕೇದಾರಗೌಳ ಅಟ ತಾಳ ) ನಾಯಿ ಬಂದದಪ್ಪ ಅಣ್ಣ ಅತ್ತಲಾಗಿರಿ ||ಪ|| ನಾಯಿ ಅಂದರೆ ನಾಯಿಯಲ್ಲ ಮಾನವ ಜನ್ಮದ ಹೀನ ನಾಯಿ ||ಅ || ಕೊಟ್ಟ ಸಾಲವ ಕೊಡದ ನಾಯಿ, ಇಟ್ಟ ಭಾಷೆಯ ತಪ್ಪುವ ನಾಯಿ ಕಟ್ಟೆ ಮೇಲೆ ಕುಳಿತುಕೊಂಡು ಅಟ್ಟಹಾಸದಿ ಬಗುಳುವ ನಾಯಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ತಂದೆ ನಾ ಬಂದೆ

(ರಾಗ ಕಮಾಚ್ ಛಾಪು ತಾಳ ) ನೀ ತಂದೆ ನಾ ಬಂದೆ ನೀ ಎನ್ನ ತಂದೆ ||ಪ|| ಮನ್ಮನದಾಧೀನ ಪೇಳೆನ್ನ ತಂದೆ ||ಅ|| ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ನೀ ತಂದೆ || ಕಾಮದಲಿ ಎನ ತಂದೆ ಕ್ರೋಧದಲಿ ಎನ ತಂದೆ ಉನ್ಮದಾಭರಣಗಳಲೆನ್ನ ತಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೀ ಕೊಡೆ ನಾ ಬಿಡೆ

(ರಾಗ ಶಂಕರಾಭರಣ ಅಟ ತಾಳ ) ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ ||ಪ|| ನೋಡುವೆ ನಿನ್ನನು ಪಾಡುವೆ ಗುಣಗಳ ಬೇಡುವೆ ಕಾಡುವೆ ನಾಡೊಳಗೆ ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ ಕಾಡಲಿ ತುರುಗಳ ಕಾಯ್ದ ರನ್ನ || ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನೆಚ್ಚಬೇಡ ಪ್ರಾಣಿ ಸಂಸಾರ

(ರಾಗ ಶಂಕರಾಭರಣ ಝಂಪೆ ತಾಳ ) ನೆಚ್ಚಬೇಡ ಪ್ರಾಣಿ ಸಂಸಾರ ಸ್ಥಿರವೆಂ- ದ್ಹುಚ್ಚು ಬುದ್ಧಿಲಿ ನೀನು ಕೆಡಬೇಡ ಕಂಡ್ಯ ಸ್ವೇಚ್ಛೆಯಿಂದಿರದೆ ಧರ್ಮದಿ ನೀನು ನಡೆ ಕಣ್ಣ ಮುಚ್ಚಿದ ಮೇಲುಂಟೆ ನರಜನ್ಮ ಸ್ಥಿರವೆಂದು ||ಪ|| ನೆಂಟರಿಷ್ಟರು ಬಂದು ಬಳಗವು ಹರಿ ಕೊಟ್ಟ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಿರನ್ನಳೆ ಕಂಡೆಯ

(ರಾಗ ರೇಗುಪ್ತಿ ತ್ರಿಪುಟ ತಾಳ ) ನಾರಿರನ್ನಳೆ ಕಂಡೆಯ ||ಪ|| ವಾರಿಜನಾಭ ದೇವರದೇವ ಸುಗುಣ ಬೇಲೂರ ಚೆನ್ನಿಗರಾಯನ, ಎನ್ನ ಪ್ರಿಯನ ||ಅ|| ಹೊಸಬಗೆ ಮಾಟದ, ಪೊಳೆವ ಕಿರೀಟದ ಎಸೆವ ಮಾಣಿಕದೋಲೆಯ ಶಶಿಕಾಂತಿಗಧಿಕವೆಂದೆನಿಪ ಮೂಗುತಿಯಿಟ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾರಾಯಣಾಯ ನಮೋ

(ರಾಗ ಮಾರವಿ ಝಂಪೆ ತಾಳ ) ನಾರಾಯಣಾಯ ನಮೋ ನಾರಾಯಣಾಯ ನಮೋ ನಾರಾಯಣಾಯ ನಮೋ ||ಪ|| ಹರಿಕೃಷ್ಣ ಶರಣೆನಲು ಅದು ನಿಮಗೆ ಲೇಸು ಹರಿಯ ಕೀರ್ತನೆಗಳನು ಜಗದೊಳಗೆ ಸೂಸು ಹರಿ ಭಕ್ತಿಯಿಲ್ಲದವರ ಸಂಗಕ್ಕೆ ಹೇಸು ಹರಿಯ ಮರೆತರೆ ಮುಂದೆ ನರಕವೆ ಹಾಸು || ದುರ್ಜನರ ಮನೆಯಲಿಹ ಹಾಲ ಸವಿಗಿಂತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂದನಂದನ ಬಾರೋ

(ರಾಗ ಮೋಹನ ಆದಿ ತಾಳ ) ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ|| ಕೊಳಲನೂದುವ ಚಂದದಿ, ಹಣೆಯಲ್ಲಿ ಸುಳಿಗೂದಲಾಡುವಂದದಿ ತುಳಸೀ ಪುಷ್ಪದ ಬೃಂದದಿ ಪುರದಾಚೆಯಲಿ ನಲಿದಾಡುವಂದದಿ ಘಲ ಘಲ ಘಲ ಘಲ ನಲಿವ ಕುಂಡಲ ನಿಜ ತೋಳುಗಳೊಪ್ಪುವ ಬಾಪುರಿಗಳಿಂದ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಂಬು ಕಂಡ್ಯ ಮನವೆ

(ರಾಗ ಕೇದಾರಗೌಳ ಅಟತಾಳ) ನಂಬು ಕಂಡ್ಯ ಮನವೆ ನಂಬು ಶ್ರೀ ಕೃಷ್ಣನ ಚರಣಕಮಲವ ||ಪ|| ಒಂಭತ್ತು ಬಾಗಿಲ ಪಟ್ಟಣದೊಳಗೆ ಸಂಭ್ರಮದಿಂದ ಬೈಲಾಗದ ಮುನ್ನ ನೀ || ಆರು ಮಂದಿ ಕಳ್ಳರು ಊರೊಳಗೆ ಸೂರೆಮಾಡಿ ಘಾಸಿ ಮಾಡದ ಮುನ್ನ ನೀ || ಏಳು ಸುತ್ತಿನ ಕೋಟೆ ಘನದುರ್ಗವನ್ನು
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಥವಾನೇರಿದ ರಾಘವೇಂದ್ರ

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹ್ಯಾಂಗೆ ಮಾಡಲಯ್ಯಾ, ಪೋಗುತಿದೆ ಆಯುಷ್ಯ !

ರಚನೆ : ಗೋಪಾಲದಾಸರು ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ ಭೂಸುರ ದೇಹದ ಜನುಮವು ಎನಗೆ ಸಂಭವಿಸಲಾಗಿ ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ದಾಸ ಸಾಹಿತ್ಯ ಪ್ರಕಾರ
ಬರೆದವರು